ಈ ವರ್ಷದ ದಿವಾಣ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ಭಾಗವತ, ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.

ಬಂಟ್ವಾಳದ ಕೋಡಪದವಿನ ಶ್ರೀ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನವರಾತ್ರಿಯ ಸಂದರ್ಭ ಅ.14ರಂದು ರಾತ್ರಿ 8.30ಕ್ಕೆ ದಿವಾಣ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭಾಗವಹಿಸಲಿದ್ದಾರೆ. ಧರ್ಮಸ್ಥಳ ಮೇಳದ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರು ಪದ್ಯಾಣ ಅವರನ್ನು ಅಭಿನಂದಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಯಕ್ಷಗಾನ ಪ್ರದರ್ಶನ: ದಿ.ದಿವಾಣ ತಿರುಮಲೇಶ್ವರಿ ಅಮ್ಮನವರ ಸ್ಮರಣಾರ್ಥ ದಿವಾಣ ಈಶ್ವರ ಭಟ್ ಮತ್ತು ಸಹೋದರರು ಸೇವೆಯಾಗಿ ಸಭಾ ಕರ‍್ಯಕ್ರಮದ ಬಳಿಕ ರಾತ್ರಿ 10ರಿಂದ ಶ್ರೀ ಪಂಚಲಿಂಗೇಶ್ವರ ಯಕ್ಷಕಲಾ ವೃಂದ, ಬಾಯಾರು ಅವರಿಂದ ಯಕ್ಷಗಾನ ಪ್ರದರ್ಶನ- ಬಾಲ ಪ್ರತಿಭಾ ದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಜಿ.ಕೆ. ನಾವಡ ಬಾಯಾರು, ಪುರುಷೋತ್ತಮ ಭಟ್ ನಿಡುವಜೆ, ಶಿತಿಕಂಠ ಭಟ್ ಉಜಿರೆ, ಶ್ರೀಧರ ವಿಟ್ಲ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಪೃಥ್ವಿಚಂದ್ರ ಶರ್ಮ ಪೆರುವೋಡಿ, ಅಕ್ಷಯ್ ಭಟ್ ಮೂಡುಬಿದಿರೆ, ಅನರ್ಘ್ಯರತ್ನ ಪೆರುವೋಡಿ, ಶ್ರೀರಾಮ ಕುರಿಯ, ತೇಜಸ್ ಬಾಯಾರು, ವೈದೇಹಿ ಪದ್ಯಾಣ, ಶಶಾಂಕ್ ಬಾಯಾರು, ಕಿರಣ್ ಬಾಯಾರು, ಪೂರ್ವ ಕುರಿಯ, ಮುತ್ತ ಕುರಿಯ ಸಹಕರಿಸಲಿದ್ದಾರೆ.

– ವಿಜಯ ಕರ್ನಾಟಕ

error: Content is protected !!
Share This