ಇತ್ತೀಚೆಗೆ ನಮ್ಮನಗಲಿದ ಹಿರಿಯ ತಾಳಮದ್ಡಲೆ ಅರ್ಥದಾರಿ, ಪಿ. ಎಲ್. ಉಪಾಧ್ಯಾಯರು (90) ಮಂಗಳೂರಿನ ಯಕ್ಷಗಾನ ವಲಯದಲ್ಲಿ ಒಬ್ಬ ಸ್ಮರಣಿಯ ಹಿರಿಯರು, 1975 ರ ತನಕ ತಾಳಮದ್ಡಲೆಯಲ್ಲಿ ಸಕ್ರಿಯರಾಗಿದ್ದರು.

ಆ ಬಳಿಕ ತನ್ನ ಉದ್ಯಮ – ಹೊಟೆಲ್ ದುರ್ಗಾಭವನ, ಮಣ್ಣಗುಡ್ಡೆ, ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿ ಬಂದುದರಿಂದ ತುಸು ದೂರ ಸರಿದರು. ಪೊಳಲಿ ಶಾಸ್ತ್ರಿ, ಕುಬಣೂರು ಬಾಲಕೃಷ್ಣ ರಾವ್, ಮಂದಾರ ಕೇಶವ ಭಟ್, ಮಾಧವ ಆಚಾರ್ಯ , ಹೊಸಬೆಟ್ಟು ನಾರಾಯಣ ರಾವ್, ಕೊಂಡಾನ ವಾಮನ ಹರಿದಾಸ್, ಕೂಳೂರು ಶಿವ ರಾವ್, ಬಾಳ ರಮಾನಾಥ ರಾವ್, ಮೊದಲಾದ ಕಲಾವಿದರ ಜತೆ ಸಕ್ರಿಯರಾಗಿದ್ದರು. ಅವರ ಶ್ರೀರಾಮ, ಸುಧನ್ವ, ಕೈಕೇಯಿ, ಧರ್ಮರಾಜ, ವಿಧುರ ಇತ್ಯಾದಿ ಪಾತ್ರಗಳು ಅವರಿಗೆ ಪ್ರಸಿದ್ಧಿ ನೀಡಿದ್ಡವು. ಮಂಗಳೂರಿನ ಬ್ರಾಹ್ಮಣ ಸಭಾ, ಮತ್ತು ಇತರ ಹಲವು ಸಾಂಸ್ಕೃತಿಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದ ಉಪಾಧ್ಯಾಯರು ಓರ್ವ ಮಿತಭಾಷಿ, ಸ್ನೇಹ ಪೂರ್ಣ ನಡವಳಿಕೆಯ ಸುಸಂಸ್ಕೃತ ವ್ಯಕ್ತಿಯಾಗಿ ಆಪ್ತರಾಗಿದ್ದರು.

– ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು