ಕನ್ನಡದೋಜ ಪೆರಡಾಲ ಕೃಷ್ಣಯ್ಯ – ಸಮಗ್ರ ಸಾಹಿತ್ಯ ಸಂಪುಟ

 

 

ತಾವು ರಚಿಸಿದ ಕೃತಿಗಳ ಮೂಲಕ ಮುಂದಿನ ತಲೆಮಾರಿಗೆ ಪರಿಚಿತರಾಗುವುದು ಒಂದು ವಿಧ. ತನ್ನ ಬದುಕೇ ಉಳಿದವರಿಗೆ ಮಾದರಿಯಾಗುವ ಹಾಗೆ ಬದುಕಿ ಸಾರ್ಥಕತೆಯನ್ನು ಪಡೆಯುವುದು ಮತ್ತೊಂದು ರೀತಿ. ಈ ಎರಡೂ ರೀತಿಗಳಲ್ಲಿ ಸಾರಸ್ವತ ಜನಮನದಲ್ಲಿ ಉಳಿದವರು ದಿವಂಗತ ಪೆರಡಾಲ ಕೃಷ್ಣಯ್ಯನವರು. ತಾನು ಹುಟ್ಟಿದ ಊರಿಗೂ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ತಂದುಕೊಟ್ಟವರು.

23.12.1893 ರಂದು ಹುಟ್ಟಿ 16.8.1973 ರಂದು ನಿಧನರಾದ ಕೃಷ್ಣಯ್ಯನವರು ತನ್ನ ಸುಮಾರು ಎಂಬತ್ತು ವರ್ಷಗಳ ಬದುಕಿನಲ್ಲಿ ಸಾಹಿತ್ಯ ರಚನೆ ಮತ್ತು ಬೋಧನೆಗಳಲ್ಲಿ ಮಾಡಿದ ಸಾಧನೆಯು ಅವರ ಬಂಧು ಗಳಿಂದಲೂ ಶಿಷ್ಯರಿಂದಲೂ ಪ್ರಸಿದ್ಧಿಗೆ ಬಂತೇ ವಿನಾ ಅವರಾಗಿ ಅದನ್ನೆಂದೂ ಗಳಿಸಿದವರೂ ಅಲ್ಲ; ಬಯಸಿದವರೂ ಅಲ್ಲ. ಇಂದೂ ಕೃಷ್ಣಯ್ಯನವರನ್ನು ನೆನಪಿಸಿಕೊಳ್ಳುವ ಅವರ ದೊಡ್ಡ ಶಿಷ್ಯವರ್ಗವೊಂದೇ ಅವರ ಆಸ್ತಿ.

20ನೇ ಶತಮಾನದ ಕಾಸರಗೋಡಿನ ಸಾಹಿತ್ಯ ಸಂಸ್ಕೃತಿಗಳ ಎಲ್ಲ ವೈಭವ-ತಲ್ಲಣಗಳ ಪ್ರತೀಕದಂತಿದ್ದವರು ಪೆರಡಾಲ ಕೃಷ್ಣಯ್ಯನವರು. ಅವರಲ್ಲಿ ನೋವಿದೆ, ವಿನಯವಿದೆ, ಪರಂಪರೆಯ ಉಳಿವಿನ ಕಾಳಜಿಯಿದೆ. ಒಂದೆಡೆ ಪ್ರಾಸ ತ್ಯಾಗದ ರೂವಾರಿ ಗೋವಿಂದ ಪೈಗಳಿದ್ದರೆ, ನವೋದಯದ ಧೋರಣೆಗಳನ್ನೂ ಛಂದಸ್ಸು, ಪ್ರಾಸಗಳ ಚೌಕಟ್ಟಿನಲ್ಲೇ ಹಿಡಿದಿಟ್ಟ ಕೃಷ್ಣಯ್ಯನವರಿದ್ದಾರೆ!

ಅನುಪಲಬ್ಧವಾಗಿದ್ದ ಕೃಷ್ಣಯ್ಯನವರ ಅಪೂರ್ವ ಸಾಹಿತ್ಯ ಸಂಪತ್ತನ್ನು ಮತ್ತೆ ದೊರಕಿಸಿ ಕೊಟ್ಟಿದ್ದಾರೆ. ಅವರ ಮೊಮ್ಮಗನಾದ ಡಾ. ವರದರಾಜ ಚಂದ್ರಗಿರಿಯವರು. ಸಾಹಿತ್ಯಾಭ್ಯಾಸಿಗಳಿಗೆ ಇದೊಂದು ಅಮೂಲ್ಯ ಕೊಡುಗೆಯೇ ಸರಿ.

– ಪ್ರಕಾಶಕರು

error: Content is protected !!
Share This