“ಕರ್ನೂರು ಸ್ಮೃತಿ ಪರ್ವ-2018”

ದಿ| ಕರ್ನೂರು ಕೊರಗಪ್ಪ ರೈ ಹತ್ತರ ನೆನಪು

ಬೆಂಗಳೂರಿನ ಕರ್ನಾಟಕ ಕಲಾಸಂಪದ ವತಿಯಿಂದ ವಿಜಯನಗರ ಬಂಟರ ಸಂಘ ಸಭಾಂಗಣದಲ್ಲಿ ನಗರದ ಕಲಾಸಂಘಟಕ, ಕಲಾಸಾರಥಿ ಕರ್ನೂರು ಸುಭಾಷ್‌ ರೈ  ಅವರ ಸಂಯೋಜನೆಯಲ್ಲಿ ಜರಗಿದ ದಿ| ಕರ್ನೂರು ಕೊರಗಪ್ಪ ರೈಯವರ ಹತ್ತರ ನೆನಪು “ಕರ್ನೂರು ಸ್ಮೃತಿ ಪರ್ವ-2018′ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಯಕ್ಷಗಾನ ಕಲಾಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಕೊರಗಪ್ಪ ರೈಯವರ ಜೀವನ ಇಂದಿನ ಯುವಜನಾಂಗಕ್ಕೆ ಸ್ಫೂರ್ತಿಯಾಗಿದೆ. ಅವರ ಜೀವಮಾನ ಸಾಧನೆಯನ್ನು ಪರಿಗಣಿಸಿ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ನೀಡಿರುವುದು ಸಾರ್ಥಕ ಭಾವವನ್ನುಂಟು ಮಾಡಿದೆ ಎಂದು ಅವರು ನುಡಿದರು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ|  ಭಾಸ್ಕರ ರೈ  ಕುಕ್ಕುವಳ್ಳಿ ಅವರು ಸಂಸ್ಮರಣಾ ಭಾಷಣ ಮಾಡಿ ಸಂಘಟಕರಾಗಿ, ವೇಷಧಾರಿಯಾಗಿ, ಭಾಗವತರಾಗಿ ಬಳಿಕ ಮೇಳದ ಯಜಮಾನ ರಾಗಿ ಐದು ದಶಕಗಳಿಗಿಂತ ಹೆಚ್ಚು ಕಾಲ ಯಕ್ಷಗಾನಕ್ಕಾಗಿ ಬದುಕು ತೇದ ಕರ್ನೂರು ಕೊರಗಪ್ಪ ರೈ ತನ್ನ ಸರ್ವಸ್ವವನ್ನೂ ಅದಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರು ಯಕ್ಷಗಾನ ಕಲಾವಿದರಿಗೆ ಘನತೆ-ಗೌರವ ತಂದುಕೊಟ್ಟ ಮೇರು ಕಲಾವಿದ ಎಂದರು.

ಮುಂಬಯಿಯ ಭವಾನಿ ಶಿಪ್ಪಿಂಗ್‌ ಇಂಡಿಯಾದ ಕೆ.ಡಿ. ಶೆಟ್ಟಿ, ಸರ್ಫಾಕೋಟ್ಸ್‌ ಪೈಂಟ್ಸ್‌ನ ಪ್ರಶಾಂತ್‌ ಉಚ್ಚಿಲ್‌, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ತುಳುಕೂಟದ ಅಧ್ಯಕ್ಷ ಜಯರಾಮ ಸೂಡ, ಸಂಗೀತ ನಿರ್ದೇಶಕ ಗುರುಕಿರಣ್‌, ಬಿ.ಬಿ.ಎಂ.ಪಿ. ಸದಸ್ಯ ಕೆ.ಎ. ರಾಜೇಂದ್ರ ಸಿಂಗ್‌, ಭಾಗವತ ಪಟ್ಲ ಸತೀಶ್‌ ಶೆಟ್ಟಿ, ಕಲಾಪೋಷಕರಾದ ಚೇವಾರು ಚಿದಾನಂದ ಕಾಮತ್‌, ರಾಘವೇಂದ್ರ ಶೆಟ್ಟಿ, ವೆಂಕಪ್ಪ ಹೆಗ್ಡೆ, ಉಪೇಂದ್ರ ಶೆಟ್ಟಿ, ವೆಂಕಟೇಶ್‌ ಮೂರ್ತಿ, ಸಂತೋಷ್‌ ಶೆಟ್ಟಿ ಜಪ್ತಿ, ಪ್ರತಾಪ್‌ ಕುಮಾರ್‌ ಶೆಟ್ಟಿ, ಸಂದರ್‌ ರಾಜ್‌ ರೈ ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಪೂರ್ವಾಹ್ನ ಯಕ್ಷಗಾನದ ಹಿರಿಯ ವಿದ್ವಾಂಸ ಮತ್ತು ವಿಶ್ರಾಂತ ಪ್ರಾಚಾರ್ಯ ಡಾ| ಎಂ. ಪ್ರಭಾಕರ ಜೋಶಿ “ಕರ್ನೂರು ದಶಕದ ಸ್ಮೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ತನ್ನ ಪ್ರಾದೇಶಿಕ ಮಿತಿಯನ್ನು ದಾಟಿ ಇಂದು ವಿಶ್ವಮಾನ್ಯವಾಗಿ ಬೆಳೆದಿದೆ. ಇದರ ಹಿಂದೆ ಕರ್ನೂರು ಅವರಂಥ ನೂರಾರು ವ್ಯಕ್ತಿಗಳು ಅರ್ಪಣಾಭಾವದಿಂದ ದುಡಿದಿದ್ದಾರೆ. ಯಾವುದೇ ರಂಗದಲ್ಲಿ ಕಲಾವಿದನಾದವನಿಗೆ ಅಳಿವಿಲ್ಲ. ಆತ ನಮ್ಮ ಸ್ಮೃತಿ ಯಲ್ಲಿ ಸದಾ ಜೀವಂತವಾಗಿರುತ್ತಾನೆ ಎಂದರು.

ಸಾಮಾಜಿಕ ಚಿಂತಕ ಉದಯ ಧರ್ಮಸ್ಥಳ, ತುಳುವೆರೆಂಕುಲು ಕೂಟದ ಅಧ್ಯಕ್ಷ ವಿಜಯ ಕುಮಾರ್‌ ಕುಲಶೇಖರ, ಯಕ್ಷಗಾನ ಅಕಾಡೆಮಿ ಸದಸ್ಯ ಜಬ್ಟಾರ್‌ ಸಮೋ ಸಂಪಾಜೆ, ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯ, ಉದ್ಯಮಿ ಗಣೇಶ್‌ ರಾವ್‌, ವೇದಕುಮಾರ್‌, ಎ. ಎನ್‌. ಕುಲಾಲ್‌, ನರಸಿಂಹ ಬೀಜಾಡಿ, ಆಶಾನಂದ, ಉಮೇಶ್‌ ಬಂಗೇರ, ರಾಮಕೃಷ್ಣ ಕವತ್ತಾರು, ತಾರಾನಾಥ ಅಡಪ, ಸತೀಶ್‌ ಅಕ³ಲ, ನಾಗರಾಜ ಆಚಾರ್ಯ ಮೊದಲಾದವರು ವೇದಿಕೆಯಲ್ಲಿದ್ದರು. ಮುಂಬಯಿ ಕಲಾಸಂಪದದ ಸಂಚಾಲಕ ಕರ್ನೂರು ಮೋಹನ್‌ ರೈ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಮತ್ತು ಕರ್ನಾಟಕ ಕಲಾಸಂಪದದ ಅಧ್ಯಕ್ಷ ಕರ್ನೂರು ಸುಭಾಷ್‌ ರೈ ವಂದಿಸಿದರು. ಕಲಾವಿದ ಕದ್ರಿ ನವನೀತ ಶೆಟ್ಟಿ, ರಾಜ್‌ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವೀರ ತರಣಿಸೇನ ತಾಳಮದ್ದಳೆ, ಯಕ್ಷನಾಟ್ಯ, ಗಾನ-ನೃತ್ಯ-ಕುಂಚ ಸಂಭ್ರಮ ಹಾಗೂ “ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನಗೊಂಡಿತು.

ಸೀತಾರಾಮ್‌ ಕಟೀಲು ಅವರಿಗೆ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಕಟೀಲು ಸೀತಾರಾಮ ಕುಮಾರ್‌ ಅವರಿಗೆ 2017-18ನೇ ಸಾಲಿನ “ಕರ್ನೂರು ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬೇಬಿ ಸೀತಾರಾಮ ಕುಮಾರ್‌ ಅವರನ್ನೂ ಗೌರವಿಸಲಾಯಿತು. ಅಲ್ಲದೆ ಬೆಂಗಳೂರಿನ ಉದ್ಯಮಿ ಹಾಗೂ ಮದರ್‌ ಫೌಂಡೇಶನ್‌ ಅಧ್ಯಕ್ಷ ಕುತ್ಯಾರು ರಾಜೇಶ್‌ ಶೆಟ್ಟಿ ಅವರಿಗೆ “ಕರ್ನಾಟಕ ಕಲಾಸಂಪದ’ ವಿಶೇಷ ಪ್ರಶಸ್ತಿ ನೀಡಲಾಯಿತು. ಮಯ್ಯ ಯಕ್ಷಕಲಾ ಪ್ರತಿಷ್ಠಾನದ ವಾಸುದೇವ ಮಯ್ಯ, ಹಿರಿಯ ಯಕ್ಷಗಾನ ಕಲಾವಿದರಾದ ಐರೋಡಿ ಗೋವಿಂದಪ್ಪ ಮತ್ತು ಕೊಳ್ತಿಗೆ ನಾರಾಯಣ ಗೌಡ, ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನದ ಕಾರ್ಯದರ್ಶಿ ಆರ್‌.ಕೆ. ಭಟ್‌ ಬೆಳ್ಳಾರೆ, ಶೀಲಾ ಎಕ್ಯುಪ್‌ಮೆಂಟ್ಸ್‌ನ ವಿಜಯ ಶೆಟ್ಟಿ ಇವರಿಗೆ ದಂಪತಿ ಸಹಿತ “ಕಲಾಸಂಪದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

– ಉದಯವಾಣಿ

error: Content is protected !!
Share This