ನಿವೃತ್ತ ಅಂಚೆ ಮಾಸ್ತರ್, ಹಿರಿಯ ಯಕ್ಷಗಾನ ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಸಂಘಟಕ ಪೆರಡಂಜೆ ಕೆ. ಗೋಪಾಲಕೃಷ್ಣ ಭಟ್ (72) ಅವರು ಅ.8ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ ದಿ| ಎಂ.ವಿ. ಬಳ್ಳುಳ್ಳಾಯ ಅವರೊಂದಿಗೆ ಸೇರಿ ಕೋಟೂರು ಕಾರ್ತಿಕೇಯ ಕಲಾನಿಲಯವನ್ನು ಕಟ್ಟಿ ಬೆಳೆಸಿದ್ದರು. ಕೋಟೂರಿನಲ್ಲಿ ಅಂಚೆ ಕಚೇರಿ ತೆರೆಯಲು ಕಾರಣರಾಗಿ, ನಿವೃತ್ತರಾಗುವವರೆಗೆ ಮುಖ್ಯ ಅಂಚೆ ಮಾಸ್ತರ್ ಆಗಿ ದುಡಿದಿದ್ದರು. ಹವ್ಯಾಸಿ ನಾಟಕ ಕಲಾವಿದರಾಗಿ, ಯಕ್ಷಗಾನ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದರು. ಲಂಕಾಪತನ, ರಾಜಾ ದಿಲೀವ, ಸ್ಕಂದ ಪರಿಣಯ, ಮುಳಿಯಾರು ಕ್ಷೇತ್ರ ಮಹಾತ್ಮೆ, ಸೌಭಾಗ್ಯ ಸುಂದರಿ, ದಕ್ಷಾಧ್ವರ (ಹವ್ಯಕ) ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಮೊದಲ ಬಾರಿಗೆ ಮಲಯಾಳ ಭಾಷೆಯಲ್ಲಿ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶಿಸಿದ ಖ್ಯಾತಿ ಇವರದ್ದಾಗಿದೆ

ಉದಯವಾಣಿ

error: Content is protected !!
Share This