ಕಾಂತಾವರ ಕನ್ನಡ ಸಂಘ ಕಾರ್ಯಾಧ್ಯಕ್ಷರಾಗಿ ನಿರಂಜನ್ ಎನ್.ಮೊಗಸಾಲೆ ಆಯ್ಕೆಯಾಗಿದ್ದಾರೆ. ಕಾಂತಾವರ ಕನ್ನಡ ಸಂಘವನ್ನು 42 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಸಾಹಿತಿ ಡಾ.ನಾ.ಮೊಗಸಾಲೆ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿ ಮುಂದೆ ಇತರರು ಆ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಅಪೇಕ್ಷಿಸಿರುವುದರಿಂದ ಸಂಘ ವಾರ್ಷಿಕ ಮಹಾಸಭೆಯಲ್ಲಿ ನಿರಂಜನ ಮೊಗಸಾಲೆ ಕಾರ್ಯಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸ್ವ ಉದ್ಯೋಗಿ ನಿರಂಜನ ಮೊಗಸಾಲೆ ಈಗಾಗಲೇ ಕಾಂತಾವರ ಕನ್ನಡ ಸಂಘ ಹಾಗೂ ಅಲ್ಲಮಪ್ರಭು ಪೀಠದಲ್ಲಿ ಸಕ್ರಿಯರಾಗಿರುವುದರ ಜತೆಗೆ ಕಾಂತಾವರದಲ್ಲಿ ಸಿದ್ಧಗೊಳ್ಳುತ್ತಿರುವ ಸಂಸ್ಕೃತಿ ಗ್ರಾಮದ ರೂವಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.

error: Content is protected !!