ಯಕ್ಷಗಾನದ ಯುಗ ಪುರುಷರೆನಿಸಿದ ಬಡಗುತಿಟ್ಟಿನ ಭಾಗವತ ಶ್ರೇಷ್ಠ ನಾರ್ಣಪ್ಪ ಉಪ್ಪೂರು ಅವರ ಜನ್ಮ ಶತಮಾನೋತ್ಸವದ ಆಚರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಮದಿಗೆ 2019ರ ಫೆಬ್ರವರಿ 2ನೇ ವಾರದಲ್ಲಿ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ.

ಎರಡು ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನೆಗಾಗಿ ಅವರ ಶಿಷ್ಯರ ಮತ್ತು ಅಭಿಮಾನಿಗಳ ಸಮಾಲೋಚನೆ ಸಭೆ ನ.18ರ ಮಧ್ಯಾಹ್ನ 3 ಗಂಟೆಗೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ನಾರ್ಣಪ್ಪ ಉಪ್ಪೂರರ ಅಭಿಮಾನಿಗಳು, ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕೆಂದು ಉಪ್ಪೂರರ ಜನ್ಮ ಶತಮಾನೋತ್ಸವ ಆಚರಣೆಯ ‘ಶತಸ್ಮೃತಿ’ ಕಾರ್ಯಕ್ರಮದ ಸಂಘಟಕರ ಪರವಾಗಿ ಡಾ.ಶ್ರೀಧರ ಉಪ್ಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Share This