ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಣೇಶಪುರದಲ್ಲಿ ದಿನಾಂಕ 17/02/2018ರಂದು ನಡೆದ 79ನೇ ಶೇಣಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಹಾಗಣಪತಿ ದೇವಸ್ಥಾನದ ಹಿರಿಯ ಕಾರ್ಯಕರ್ತ ಶ್ರೀ ದೀನನಾಥ ಶೆಟ್ಟಿಗಾರ್ ಇವರನ್ನು ಶೇಣಿ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಯಕ್ಷಗಾನ ಕಲಾವಿದ ಶ್ರೀ.ಬಿ.ಮಹಮ್ಮದ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಭಾಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ವಿನಯ್ ಆಚಾರ್ ಹೊಸಬೆಟ್ಟು ಇವರು ಶೇಣಿ ಸಂಸ್ಮರಣ ಭಾಷಣ ಮಾಡಿದರು. ಗಿರೀಶ್ ನಾವುಡ ಗಣೇಶಪುರ ಇವರು ಸಮ್ಮಾನಿತರನ್ನು ಅಭಿನಂದಿಸಿದರೆ ಪಿ.ವಿ.ರಾವ್ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
ಬಳಿಕ ಕೆ.ಜೆ.ಗಣೇಶ್ ಮತ್ತು ಸಹೋದರರ ಹಿಮ್ಮೇಳನದೊಂದಿಗೆ “ಚೂಡಾಮಣಿ” ಎಂಬ ಆಖ್ಯಾನದ ತಾಳಮದ್ದಳೆಯು ಪ್ರದರ್ಶನಗೊಂಡಿತು.
error: Content is protected !!
Share This