ಸಾಮಗ್ರಿಗಳು

ನಿಂಬೆ ಹಣ್ಣು – ಎರಡು, ನೀರು – ಅರ್ಧ ಲೀಟರ್, ಬೆಲ್ಲ – ದೊಡ್ಡ ನಿಂಬೆ ಹಣ್ಣಿನ ಗಾತ್ರದ್ದು (ಬೇಕಾದಲ್ಲಿ ಜಾಸ್ತಿ), ಕೆಂಪು ಮೆಣಸು – ಎರಡರಿಂದ ಮೂರು, ಅರಶಿನ ಪುಡಿ – ಒಂದು ಚಮಚ, ಕೆಂಪು ಮೆಣಸಿನ ಪುಡಿ – ಎರಡು ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ತುಪ್ಪ – ಎರಡು ಚಮಚ, ಸಾಸಿವೆ – ಒಗ್ಗರಣೆಗೆ ತಕ್ಕಷ್ಟು, ಕರಿ ಬೇವಿನ ಎಲೆ – ಐದಾರು ಎಲೆಗಳು

ಮಾಡುವ ವಿಧಾನ

ಅರ್ಧ ಲೀಟರ್ ನೀರನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಬೇಕು. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಶಿನ ಪುಡಿ, ಬೆಲ್ಲ, ಉಪ್ಪು ಹಾಗೂ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದಿದ ಮೇಲೆ, ಒಗ್ಗರಣೆ ಸೌಟಿನಲ್ಲಿ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಕೆಂಪು ಮೆಣಸು ಹಾಕಿ, ಸಾಸಿವೆ ಚಿಟ ಪಟ ಸದ್ದು ಮಾಡುವಾಗ ಕರಿಬೇವಿನ ಎಲೆಗಳನ್ನೂ ಸೇರಿಸಿ ಕುದಿದಿರುವ ಸಾರಿಗೆ ಹಾಕಿದರಾಯಿತು. ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಲು ರುಚಿ.