ಸಾಮಾಗ್ರಿಗಳು
ಬಸಳೆ ಎಲೆ – ಸುಮಾರು ಹತ್ತು
ಈರುಳ್ಳಿ- ಒಂದು
ಹಸಿ ಮೆಣಸು – ಎರಡು
ಜೀರಿಗೆ – ಒಗ್ಗರಣೆಗೆ ಬೇಕಾದಷ್ಟು, ಸುಮಾರು ಒಂದು ಟೀ ಸ್ಪೂನ್
ತುಪ್ಪ- ನಾಲ್ಕು ಚಮಚ
ಮೊಸರು – ಎರಡು ಕಪ
ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ಕ್ರಮ

ಬಸಳೆ ಸೊಪ್ಪನ್ನು ತೊಳೆದು ನೀರಿನ ಪಸೆ ಇಲ್ಲದ ಹಾಗೆ ಒರಸಿಡಿ. ಆಮೇಲೆ ಅದನ್ನು ಸಣ್ಣಕ್ಕೆ ಕತ್ತರಿಸಿ, ಸಣ್ಣ ಬಾಣಲೆಯೋ ಅಥವಾ ಒಗ್ಗರಣೆ ಸೌಟಿನಲ್ಲೋ ಎರಡು ಸ್ಪೂನ್ ತುಪ್ಪ ಹಾಕಿ ರೋಸ್ಟ್ ಮಾಡಿಕೊಳ್ಳಿ. ಅದರ ಲೋಳೆತನವೆಲ್ಲ ಹೋಗಿ ನಸು ಕಂದು ಬಣ್ಣಕ್ಕೆ ತಿರುಗಿ ಗರಿ ಗರಿ ಆಗುವಾಗ ಸ್ಟೌ ಆರಿಸಿ. ಅದು ತಣ್ಣಗಾಗಲಿ. ಅದು ತಣ್ಣಗಾಗುವ ಸಮಯದಲ್ಲಿ ಈರುಳ್ಳಿ ಮತ್ತು ಹಸಿ ಮೆಣಸಿನ ಕಾಯಿಯನ್ನು ಸಾಧ್ಯವಾದಷ್ಟು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಇಷ್ಟರಲ್ಲಿ ತಣ್ಣಗಾಗಿರುವ ಮಿಶ್ರಣವನ್ನು ಒಂದು ಗುಂಡು ಕಲ್ಲೋ ಇಲ್ಲಾ ಕುಟ್ಟಾಣಿಯಲ್ಲೋ ಅರೆಯಿರಿ. ಪೇಸ್ಟ್ ಥರ ಆಗಬೇಕೆಂದೇನಿಲ್ಲ. ಅದರ ರಸ ಬಿಟ್ಟರಾಯಿತು. ನಂತರ ಒಂದು ಬಾಣಲೆಗೆ ಎರಡು ಸ್ಪೂನ್ ತುಪ್ಪ ಹಾಕಿ ಜೀರಿಗೆ, ಸಣ್ಣಗೆ ಹೆಚ್ಚಿದ ನೀರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ರೋಸ್ಟ್ ಮಾಡಿ. ಒಲೆ ಆರಿಸಿ, ಸ್ವಲ್ಪ ತಣ್ಣಗಾದ ಮೇಲೆ ಅರೆದ ಬಸಳೆ ಸೊಪ್ಪನ್ನೂ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣವನ್ನು ತಂಪಾದ ಮೊಸರಿಗೆ ಸೇರಿಸಿ ಅವರವರ ರುಚಿಗೆಷ್ಟು ಬೇಕೋ ಅಷ್ಟು ಉಪ್ಪನ್ನೂ ಸೇರಿಸಿ. ಊಟಕ್ಕೂ ರುಚಿ, ಪುಲಾವ್ ಜೊತೆಯಂತೂ ಮತ್ತಷ್ಟು ಖುಶಿ!

error: Content is protected !!
Share This