ಯಕ್ಷಗಾನ ಕಲೆಯ ವೈಶಿಷ್ಟ್ಯವೋ ಏನೋ??? ಒಮ್ಮೆ ಆಸಕ್ತಿ ಮೂಡಿ, ಅದರ ಗೀಳು ಹಿಡಿದರೆ ಸಾಕು, ಅದರ ಮೋಡಿಯಿಂದ ವಿಮುಖರಾಗಲು ಕಷ್ಟಸಾದ್ಯವೇ. ಹೀಗೆ ಕಲೆಯ ಮೇಲಿನ ಅತೀವ ಪ್ರೀತಿ,ಆಸಕ್ತಿಯಿಂದ, ಏನಾದರೂ ಸೇವೆ-ಸಾಧನೆ ಮಾಡಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆಯೇ “ಯಕ್ಷಸಿಂಚನ”. “ಅಚ್ಚ ಕನ್ನಡದ ಹೆಮ್ಮೆಯ ಪರಿಪೂರ್ಣ ಕಲೆಯ ಆರಾಧನೆಯಲ್ಲೊಂದು ಅಳಿಲು ಸೇವೆ” ಧ್ಯೇಯವಾಕ್ಯದೊಂದಿಗೆ ಆರಂಭವಾದ ಯಕ್ಷಸಿಂಚನ, ಇಂದು 9 ನೇ ವರುಷಕ್ಕೆ ಕಾಲಿಟ್ಟಿದೆ. ಅದರ ಪ್ರಯುಕ್ತ ವಾರ್ಷಿಕೋತ್ಸವವನ್ನು ಸೆಪ್ಟಂಬರ್ 2 ರಂದು ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಆಚರಿಸಿಕೊಳ್ಳುತ್ತಿದ್ದೇವೆ.
ಪ್ರತಿ ವರುಷ  ಯಕ್ಷಗಾನಕ್ಷೇತ್ರದಲ್ಲಿನ ಓರ್ವ ಸಾಧಕರಿಗೆ ಸಾರ್ಥಕ-ಸಾಧಕ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದೆದ್ದೇವೆ. ಈ ವರುಷ ಮರಣೋತ್ತರವಾಗಿ ಬಡಗುತಿಟ್ಟಿನ ಖ್ಯಾತ ಭಾಗವತರಾಗಿದ್ದ ಶ್ರೀ ಸತೀಶ್ ಕೆದಿಲಾಯ ಅವರಿಗೆ ಗೌರವವನ್ನು ಸಲ್ಲಿಸುತ್ತಿದ್ದೇವೆ. ಜೊತೆಗೆ 2 ವಿಶಿಷ್ಠ ಆಖ್ಯಾನಗಳು ಕೂಡ ಸಂಪನ್ನಗೊಳ್ಳಲಿದೆ. ಅಪರಾಹ್ನ  3.30 ಕ್ಕೆ ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ, ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರ ವೃಷಸೇನ ಕಾಳಗ ಮತ್ತು ಯಕ್ಷಸಿಂಚನದ ಜಲಂಧರನ ಕಾಳಗ ಎಂಬ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ಎಸ್ ಎನ್ ಸಂಪಾಜೆ (ಸಂಘಟಕರು, ಅಖಿಲಾ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನ), ಎಮ್ ಎ ಹೆಗಡೆ , ಸಿದ್ದಾಪುರ (ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡಮಿ, ಬೆಂಗಳೂರು) ಮತ್ತು ಜಿ. ಎಸ್ ಭಟ್ಟ, ಮೈಸೂರು, ಸಾಹಿತಿಗಳು ಇವರುಗಳು ಭಾಗವಹಿಸುತ್ತಿದ್ದಾರೆ.ನೀವು ಬನ್ನಿ ನಿಮ್ಮರನ್ನ ಕರೆತನ್ನಿ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
error: Content is protected !!
Share This