ಜಗದ್ಗುರು ಮಧ್ವಾಚಾರ್ಯ ಪರಂಪರೆಯ ಶಾಸ್ತ್ರಾದಿ ಧಾರ್ಮಿಕ ವಿಧಿವಿಧಾನಗಳ ಅನುಷ್ಠಾನಗಳಲ್ಲಿ ಭ್ರಾಹತಿ ಸಹಸ್ರ ಮಂತ್ರವು ಪ್ರಮುಖವಾದುದು. ಅಚಾರ್ಯ ಮಧ್ವವರಿಂದ ಉಪದೇಶಿಸಲ್ಪಟ್ಟ ವೇದ ಶಾಸ್ತ್ರಗಳ ಸತ್ವವನ್ನು ಪಾರಿಜಾತ ವೃಕ್ಷಕ್ಕೆ ತುಲನೆ ಮಾಡಿದರೆ ಮನುಕುಲಕ್ಕೆ ಆ ಪಾರಿಜಾತ ವೃಕ್ಷದ ಅನುಗ್ರಹವೇ ಪಾರಿಜಾತಪುಷ್ಪ.
ವೇದಾದಿ ಶಾಸ್ತ್ರಗಳೇ ಪಾರಿಜಾತ ಪುಷ್ಪವಾದರೆ ಆ ಪಾರಿಜಾತ ವೃಕ್ಷದ ಸಾರವಾದ ಪಾರಿಜಾತ ಪುಷ್ಪವೇ ಮಹಾಭಾರತ. ಪಾರಿಜಾತ ಪುಷ್ಪದ ಮಕರಂದವೇ ಮಹಾಭಾರತದ ಸಾರವಾದ ಭಗವದ್ಗೀತೆ, ವಿಷ್ಣು ಸಹಸ್ರನಾಮ.

ಮುಕ್ತಿ ಪ್ರದವಾದ ವಿಷ್ಣು ಸಹಸ್ರನಾಮದ ಮೂಲವೇ ‘ಭ್ರಹತಿ ಸಹಸ್ರ’ ಎಂಬುದಾಗಿ ಆಚಾರ್ಯ ಮಧ್ವರ ವ್ಯಾಖ್ಯಾನ.

ಇಂತಹ ಭ್ರಹತಿ ಸಹಸ್ರ ಮಂತ್ರವು ಸ್ವರ ಸಹಿತವಾಗಿ ಉಚ್ಛರಿಸಲು ಯೋಗ್ಯವಾದ ರೀತಿಯಲ್ಲಿ ಅನುಷ್ಠಾನಕ್ಕೆ ಪೂರಕವಾದ ವೇದಮೂರ್ತಿ ಡಾ. ಕದ್ರಿ ಪ್ರಭಾಕರ ಅಡಿಗರು ರಚಿಸಿರುವ ಈ ಪುಸ್ತಕವು ಒಂದು ಅಮೂಲ್ಯವಾದ ಕೃತಿ ಎಂಬುದು ನಮಗೆಲ್ಲ ತುಂಬಾ ಅಭಿಮಾನದ ಸಂಗತಿ. ಚತುರ್ವೆದ ಶಾಸ್ತ್ರ ಪುರಾಣ, ವೇದವ್ಯಾಕರಣ ಹೀಗೆ ಎಲ್ಲಾ ಆಯಾಮಗಳಲ್ಲೂ ನಾಡು ಕಂಡ ಒರ್ವ ಶ್ರೇಷ್ಠ ವಿದ್ವಾಂಸ, ಸಾಧಕ ಶ್ರೀಯುತ ಕದ್ರಿ ಪ್ರಭಾಕರ ಅಡಿಗರು ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗೂ ಭಾಜನರಾಗಿ, ಅಲ್ಲದೆ ಸುಬ್ರಹ್ಮಣ್ಯದಲ್ಲಿ ನಡೆದ ೨೨ನೇ ದಕ್ಷಿಣ ಕನ್ನಡ ಸಾಹಿತ್ಯ ಜಿಲ್ಲಾ ಕನ್ನಡ ಸಮ್ಮೇಳನದಲ್ಲಿ ವಿದ್ವಂತ್ ಸನ್ಮಾನ ಅಲ್ಲದೆ ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ (ಪ್ರತಿಭಾ ಸಂಪನ್ನರಾದ ಅರ್ಚಕ) ಎಂಬ ಪ್ರಶಸ್ತಿಗೆ ಮಾನ್ಯರಾದ ಇವರು ಕಲ್ಕೂರ ಪ್ರತಿಷ್ಠಾನದಿಂದ ಕಲ್ಕೂರ ವೇದ ವಾರಿಧಿ ಸಿರಿ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿದ್ದಾರೆ.

ಉಡುಪಿಯ ಅಷ್ಟ ಮಠಾಧೀಶರುಗಳಿಂದಲೂ ಮಾನ್ಯರಾದ ಡಾ. ಕದ್ರಿ ಪ್ರಭಾಕರ ಅಡಿಗರಿಂದ ಇನ್ನಷ್ಟು ವಿದ್ವತ್ ಪೂರ್ಣ ಸಾಹಿತ್ಯ ಕೃತಿಗಳು ಮೂಡಿಬರಲೆಂಬುದು ನಮ್ಮೆಲ್ಲರ ಅಶಯ.

ಎಸ್. ಪ್ರದೀಪಕುಮಾರ ಕಲ್ಕೂರ
ಅಧ್ಯಕ್ಷರು
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

error: Content is protected !!
Share This