ಭಾಗವತ ಸತೀಶ್ ಕೆದ್ಲಾಯ ಕುಟುಂಬಕ್ಕೆ ನೆರವು

 

 

ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಪ್ರತಿಭಾವಂತ ಯುವ ಭಾಗವತ ಹರ‍್ಯಾಡಿ ಸತೀಶ್ ಕೆದ್ಲಾಯ ಕುಟುಂಬಕ್ಕೆ ಅಮೆರಿಕಾದ ಯಕ್ಷಗಾನ ಕಲಾವೃಂದದ ವತಿಯಿಂದ 1 ಲಕ್ಷ ರೂ. ನೆರವನ್ನು ಬ್ರಹ್ಮಾವರ ಕುಕ್ಕಡೆಯಲ್ಲಿರುವ ಮನೆಯಲ್ಲಿ ಕೆದ್ಲಾಯ ಅವರ ಪತ್ನಿ ವಾಣಿ ಕೆದ್ಲಾಯ ಮತ್ತು ಪುತ್ರ ಆದಿತ್ಯ ಕೆದ್ಲಾಯ ಅವರಿಗೆ ಪಣಂಬೂರು ವಾಸುದೇವ ಐತಾಳ್ ಮತ್ತು ಮೀನಾಕ್ಷಿ ಐತಾಳ ಹಸ್ತಾಂತರಿಸಿದರು.

ಅಮೆರಿಕಾದ ಕಲಾವಿದರಾದ ವಾಸುದೇವ ಐತಾಳ್ ದಂಪತಿ, ಡಾ| ರಾಜೇಂದ್ರ ಕೆದ್ಲಾಯ, ಶಾಂತಿ ತಂತ್ರಿ ಹಾಗೂ ಶಶಿಧರ ಸೋಮಯಾಜಿ ಅವರ ವಿಶೇಷ ಕೊಡುಗೆಯಿಂದ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.

error: Content is protected !!
Share This