ಮಹಾಜನಪದ

ಡಾ.ವೆಂಕಟರಾಜ ಪುಣಚಿತ್ತಾಯರ ಸಮಗ್ರ ಲೇಖನಗಳ ಸಂಕಲನ.
ಸಂಪಾದಕರು  ಡಾ. ಪಾದೆಕಲ್ಲು ವಿಷ್ಣುಭಟ್ಟರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಪ್ರಕಟಿತ ಗ್ರಂಥ. 

 

ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸಾದಿಗಳ ಜೊತೆಗೆ ತುಳು ನಾಡಿನ ವಿಶಿಷ್ಟ ವಿಚಾರಗಳ ಮೇಲೆ ಸಾಕಷ್ಟು ಬೆಳಕು ಚೆಲ್ಲುವ ಕೃತಿ. ಯಕ್ಷಗಾನ ಮತ್ತು ಇತರ ಕಲಾ ಪ್ರಕಾರಗಳ ಮೇಲೂ ಇಲ್ಲಿ ಸಂಗ್ರಾಹ್ಯ ಚಿಂತನೆಗಳಿವೆ. ಭರತನ ನಾಟ್ಯ ಶಾಸ್ತ್ರದಿಂದ ತೊಡಗಿ ಲಕ್ಷ್ಮೀಶ ಕವಿಯವರೆಗೆ ಬೀಸು ನೋಟವಿದೆ.
ಒಟ್ಟು 191 ಲೇಖನಗಳು 1022 ಪುಟಗಳಲ್ಲಿ ವಿಸ್ತಾರಗೊಂಡಿವೆ.
ಸಾಹಿತ್ಯ ವಿಶ್ಲೇಷಣೆಯ 39 ಲೇಖನಗಳು,
ತುಳು ಸಾಹಿತ್ಯ ಸಂಪಾದನೆಯ 23 ಲೇಖನಗಳು
ಐತಿಹ್ಯ-ಇತಿಹಾಸದ ಕುರಿತ 27 ಲೇಖನಗಳು
ಜನಪದ- ಭೂತಾರಾಧನೆಯ ಕುರಿತ 23 ಲೇಖನಗಳು
ಯಕ್ಷಗಾನವನ್ನು ಕುರಿತು 27 ಬರೆಹಗಳು
ವ್ಯಕ್ತಿವಿಚಾರಗಳ 10 ಲೇಖನ ಮತ್ತು ಇತರ ವಿಷಯದಲ್ಲಿ 42 ಲೇಖನಗಳು ಈ ಸಂಕಲನದಲ್ಲಿ ಅಡಕಗೊಂಡಿವೆ.
ಪುಣಚಿತ್ತಾಯರ ತಲಸ್ಪರ್ಶೀ ಅಧ್ಯಯನದ ವಿಸ್ತಾರ ಲೋಕವಿದು.ಕನ್ನಡ ವಾಙ್ಮಯದಲ್ಲಿ ಅಪರೂಪವೆನ್ನಬಹುದಾದ ಕೃತಿಯನ್ನು ಸಂಪಾದಿಸಿದ ಡಾ.ಪಾದೆಕಲ್ಲು ವಿಷ್ಣು ಭಟ್ಟರು, ಪ್ರಕಟಿಸಿದ ಗೋವಿಂದಪೈ ಸಂಶೋಧನಾ ಕೇಂದ್ರ ಅಭಿನಂದನೀಯರು.
ಪುಣಚಿತ್ತಾಯರ ಸಮಗ್ರ ಚಿಂತನೆ ಒಂದೇ ಗ್ರಂಥದಲ್ಲಿ ದೊರೆಯತ್ತಿದ್ದು ಅನೇಕ ಮಾಹಿತಿಗಳು ಅವರ ಸಂಶೋಧನಾತ್ಮಕ ಬರೆಹಗಳಲ್ಲಿವೆ. ಯಕ್ಷಗಾನವನ್ನು ಕುರಿತು ಅವರು ನಡೆಸಿದ ಚಿಂತನೆ, ಕವಿ ಪರಿಚಯಗಳು ನನಗೆ ಬಹಳ ಉಪಕಾರಕ್ಕೆ ಬಂದವು.
ಡಾ. ಎಂ. ಪ್ರಭಾಕರ ಜೋಶಿ
error: Content is protected !!
Share This