ಯಕ್ಷಧ್ರುವ ಪಟ್ಲ ಸಂಭ್ರಮ – 2018ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಯಕ್ಷಗಾನ ಕಲಾವಿದರ (ವೃತ್ತಿಪರ/ಹವ್ಯಾಸಿ/ಮಹಿಳಾ) ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕನಿಷ್ಠ 50% ಅಂಕಗಳಿರತಕ್ಕದ್ದು. ಅಂಕ ಪಟ್ಟಿಯ ನಕಲು ಪ್ರತಿಯನ್ನು ಲಗತ್ತಿಸತಕ್ಕದ್ದು. ಪ್ರತಿಸಾರಿಯಂತೆ ಈ ಬಾರಿಯು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ 90%ಕ್ಕೂ ಮೇಲ್ಪಟ್ಟು ಅತ್ಯಧಿಕ ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ಬಂಗಾರದ ಪದಕದೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದರೊಂದಿಗೆ ವಿದ್ಯಾರ್ಥಿ ಪುರಸ್ಕಾರವನ್ನು ಪ್ರಾಥಮಿಕ, ಪೌಢ, ಪಿ.ಯು.ಸಿ/ಡಿಪ್ಲೊಮ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೀಗೆ ಒಟ್ಟು 5 ವಿಭಾಗಗಳಲ್ಲಿ ಪ್ರತ್ಯೇಕವಾಗಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗೆ ನೀಡಲಾಗುವುದು. ವೃತ್ತಿಪರ ಕಲಾವಿದರ ಎಲ್ಲಾ ಮಕ್ಕಳಿಗೂ (೫೦% ಗಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ್ದರೆ) ವಿದ್ಯಾರ್ಥಿ ಪ್ರೊತ್ಸಾಹ ಧನವನ್ನು ನೀಡಲಾಗುವುದು.

ಅರ್ಜಿ ನಮೂನೆಯನ್ನು, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು, ಕೇಂದ್ರ ಕಛೇರಿ, ಎಂಪೈರ್ ಮಾಲ್, ಇಲ್ಲಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-05-2018.

ಹೆಚ್ಚಿನ ವಿವರಗಳಿಗಾಗಿ ಡಾ. ಮನು ರಾವ್, ಉಪಾಧ್ಯಕ್ಷರು (9844087664) ಇವರನ್ನು ಸಂಪರ್ಕಿಸಬಹುದು.

– ಜಯಕಿರಣ 

error: Content is protected !!
Share This