ಯಕ್ಷ ಮಂಜುಳಾ ಕದ್ರಿ
(ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗ)
‘ಸೌಭಾಗ್ಯ’, ವಸಂತ ವಿಹಾರ ಕಂಪೌಂಡ್, ಕದ್ರಿ ದೇವಸ್ಥಾನದ ಬಳಿ, ಮಂಗಳೂರು-4
ಮೊ : 9900788229, 0824-2214093, 9880881471

10-10-2018ರಿಂದ 19-10-2018 ವರೆಗಿನ ಹತ್ತು ದಿನಗಳಲ್ಲಿ ಹನ್ನೊಂದು ತಾಳಮದ್ದಳೆಯ ಕಾರ್ಯಕ್ರಮಗಳು ಶ್ರೀ ಮಹಿಷಮರ್ದಿನಿ ದೇವಸ್ಥಾನ ಕಡಿಯಾಳಿ, ಉಡುಪಿ, ಶ್ರೀ ಅಮೃತೇಶ್ವರೀ ದೇವಸ್ಥಾನ ಕೋಟ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಪ್ಪನಾಡು, ಶ್ರೀ ಮಂಗಳಾದೇವೀ ದೇವಸ್ಥಾನ ಮಂಗಳೂರು, ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ನಿಟ್ಟೆ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನಂದಿಕೂರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡ್ಕೂರು, ಹಳೆಕೋಟೆ ಬೋಳಾರ ಶ್ರೀ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನ, ಶರವು ದೇವಸ್ಥಾನ, ನಮ್ಮವರು ಬಳಗ, ಶ್ರೀ ಮಹಿಷಮರ್ಧಿನಿ ದೇವಸ್ಥಾನ ನೀಲಾವರ ಇಂಥಹಾ ಶ್ರೀ ದೇವಿಯ ಸನ್ನಿಧಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ನಮ್ಮ ಸೌಭಾಗ್ಯ. ಕಾರ್ಯಕ್ರಮಗಳು ಶ್ರೇಷ್ಠತೆಯನ್ನು ಪಡೆಯುವಲ್ಲಿ ಹಿಮ್ಮೇಳ ಕಲಾವಿದರ ಹುರುಪು. ಸಾಧನೆ ಅಭಿನಂದನೀಯವಾದುದು. ಪ್ರೇಕ್ಷಕ ವರ್ಗದ ಪ್ರೋತ್ಸಾಹ, ಹಾರೈಕೆ, ಆಶೀರ್ವಾದ ನಮ್ಮೆಲ್ಲರ ಶ್ರೀರಕ್ಷೆಯಾಗಿದೆ. ಕಥಾ ಕಲಾಕುಸುಮವನ್ನು ಶ್ರೀ ದೇವಿಯ ಚರಣಾರವಿಂದಗಳಿಗೆ ಅರ್ಪಿಸುವಲ್ಲಿ ಯಕ್ಷಮಂಜುಳಾ ಬಳಗಕ್ಕೆ ಆಶ್ರಯ, ಆದರ, ಆತಿಥ್ಯ, ಪ್ರೇರಣೆ ನೀಡಿದ ಪ್ರತಿಯೊಂದು ವ್ಯವಸ್ಥಾಪನಾ ಸಮಿತಿಯವರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಾವು ಆಭಾರಿಯಾಗಿದ್ದೇವೆ.

ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ (ಅಧ್ಯಕ್ಷೆ)
ಶ್ರೀಮತಿ ಪೂರ್ಣಿಮಾ ಪ್ರಶಾಂತ್ ಶಾಸ್ತ್ರೀ (ಕಾರ್ಯದರ್ಶಿ)
ಹೆಚ್.ಟಿ. ರೂಪಾರಾಧಾಕೃಷ್ಣ
ಅರುಣಾ ಸೋಮಶೇಖರ್
ಶೈಲಜಾ ಶ್ರೀಕಾಂತ್ ರಾವ್
ಅನುಪಮಾ ಅಡಿಗ
ವನಿತ ಆರ್ ಭಟ್
ಶ್ರೀ ರವಿ ಅಲೆವೂರಾಯ ವರ್ಕಾಡಿ (ನಿರ್ದೇಶಕರು)

 

error: Content is protected !!
Share This