ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್, ಸುರತ್ಕಲ್ ಇವರ ವತಿಯಿಂದ‌‌, ದೇರಳಕಟ್ಟೆ ತಲ್ಲಂಗಡಿ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ, ಶೇಣಿ ನೂರು ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ, ಗುರು – ಶಿಷ್ಯರ ಸಂಸ್ಮರಣೆಯಾಗಿ, ತಲ್ಲಂಗಡಿ ಮನೆತನದ ದಿ. ಕವಿಭೂಷಣ ಕೆ.ಪಿ.ವಂಕಪ್ಪ ಶೆಟ್ಟಿ ಮತ್ತು ಅವರ ಶಿಷ್ಯ ದಿ. ಶೇಣಿ ಗೋಪಾಲಕೃಷ್ಣ ಭಟ್ ಇವರ ಸಂಸ್ಮರಣಿ ಹಾಗೂ ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ್ ರೈ ಕುಕ್ಕುವಳ್ಳಿ ಇವರಿಗೆ ಸಂಮಾನ ಕಾರ್ಯ ಕ್ರಮ ತಲ್ಲಂಗಡಿ ಮನೆಯಲ್ಲಿ ನಡೆಯಿತು.ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್, ಸುರತ್ಕಲ್ ನ ಪಿ ವಿ ರಾವ್ ಕಾರ್ಯ ಕ್ರಮ ಸಂಯೋಜಿಸಿ, ಶೇಣಿಯವರ ಸಂಸ್ಮರಣೆ ಮಾಡಿದರು. ತಲ್ಲಂಗಡಿ ಮನೆಯವರಾಗಿ, ನೇತೃತ್ವ ವಹಿಸಿದ ಗಣೇಶ್ ಕಾವ ಸ್ವಾಗತಿಸಿ, ಕವಿಭೂಷಣ ವೆಂಕಪ್ಪ ಶೆಟ್ಟಿ ( ಪಕೀರ ಶೆಟ್ಟಿ) ಯವರ ವ್ಯಕ್ತಿತ್ವವನ್ನು ನೆನಪಿಸಿದರು. ತಲ್ಲಂಗಡಿ ಮನೆತನಕ್ಕೆ ಸೇರಿದ ಮಾಜಿ ಶಾಸಕ ಕುತ್ತಾರುಗುತ್ತು ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಫ್ರೊ.ಡಾ. ಪ್ರಭಾಕರ್‌ ಜೋಷಿ ಶುಭಾಶಂಸನೆಗೈದರು. ತಲ್ಲಂಗಡಿ ಮನೆತನದ ಹಿರಿಯರು ಶ್ಯಾಮ ಸುಂದರ್ ಶೇಖ, ಡಾ.ಜಯರಾಮ ಮುದ್ಯ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಕವಿಭೂಷಣ ವೆಂಕಪ್ಪ‌ ಶೆಟ್ಟಿ ವಿರಚಿತ ” ಸಾಹಸ ಭೀಮ ವಿಜಯ” ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.

error: Content is protected !!
Share This