ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ತಡಂಬೈಲ್, ಸುರತ್ಕಲ್ ಇವರ ಆಶ್ರಯದಲ್ಲಿ 38 ನೇ ಶೇಣಿ ಜನ್ಮ ಶತಮಾನೋತ್ಸವದ ಸರಣಿ ತಾಳಮದ್ದಳೆ, ಶೇಣಿ ಸಂಸ್ಮರಣೆ ಮತ್ತು ಸಮ್ಮಾನ ಕಾರ್ಯಕ್ರಮವು ಕುಂಬಳೆ ಕಣಿಪುರ ದೇವಾಲಯದ ಪರಿಸರದಲ್ಲಿ ಜರಗಿತು.

ಸಭಾ ಕಾರ್ಯಕ್ರಮದಲ್ಲಿ ಕನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಭಾಜನರಾದ ಯಕ್ಷ ಕವಿ, ಭಾಗವತ, ಶೇಡಿಗುಮ್ಮೆ ವಾಸುದೇವ ಭಟ್ಟರನ್ನು ಸಮ್ಮಾನಿಸಲಾಯಿತು. ಬಳಿಕ ನಡೆದ ‘ಕರ್ಣ ಭೇದನ ‘ಯಕ್ಷಗಾನ ಕೂಟ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿತು. ಕಣಿಪುರ ದೇವಸ್ಥಾನದ ಆಡಳಿತಾಧಿಕಾರಿ ಎಂ. ರಮಾನಾಥ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆ. ಜಿ. ಬಿ. ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್. ಜಗನ್ನಾಥ ಶೆಟ್ಟಿ ಶೇಣಿ ಸಂಸ್ಮರಣೆ ಮಾಡಿದರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹರಿಕೃಷ್ಣ ಭರಣ್ಯ ಸಮ್ಮಾನಿತ ಭಾಗವತ ವಾಸುದೇವ ಭಟ್ಟರ ಕುರಿತು ಅಭಿನಂದನೆಯ ನುಡಿಗಳನ್ನಾಡಿದರು. ಟ್ರಸ್ಟ್ ಸಂಚಾಲಕ ಕಲಾವಿದ ಪಿ. ವಿ. ರಾವ್ ಸ್ವಾಗತಿಸಿದರು. ಅಶೋಕ ಕುಂಬಳೆ ವಂದಿಸಿದರು.

error: Content is protected !!