ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ)  ವತಿಯಿಂದ ಶೇಣಿ ಶತಮಾನೋತ್ಸವದ 46ನೇ ಕಾರ್ಯಕ್ರಮವು ದಿನಾಂಕ 4/12/2017ರಂದು ಮಂಚಿಯ ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗಿತು. ಶೇಣಿ ಸಂಸ್ಮರಣ ಭಾಷಣ ಮಾಡಿದ ಶ್ರೀ ಭಾಸ್ಕರ ಬಾರ್ಯರವರು ಶೇಣಿ ಗೋಪಾಲಕೃಷ್ಣ ಭಟ್ಟರ ಪುರಾಣ ಜ್ಞಾನ, ಚಿಂತನೆ, ವಾಕ್ ಚಾತುರ್ಯ,ಕಂಠ ಸಿರಿ, ಆಚಾರ,ವ್ಯಕ್ತಿತ್ವ , ರೂಪ ಇದೆಲ್ಲವೂ ಅವಿಸ್ಮರಣೀಯ ಹಾಗೂ ಅವರೊಬ್ಬ ಯಕ್ಷಗಾನ ರಂಗದ ಯುಗಪುರುಷ ಎಂದು ಹೇಳಿದರು. ಪೂಜ್ಯ ಶ್ರೀ ಶ್ರೀ ಮಹಾಬಲ ಸ್ವಾಮೀಜಿ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು ಕನ್ಯಾನ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟೀಲು ಮೇಳದ ಹಿರಿಯ ಕಲಾವಿದ ಶ್ರೀ ಶ್ರೀಧರ ಪಂಜಾಜೆಯವರನ್ನು ಶೇಣಿ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರರಾದ ಶ್ರೀ ನಾರಾಯಣ ಭಟ್ ಕೈಯ್ಯೂರು ಇವರು ಸಮ್ಮಾನಿತರನ್ನು ಅಭಿನಂದಿಸಿದರೆ, ಪಿ.ವಿ.ರಾವ್ ಅವರು ಸ್ವಾಗತಿಸಿದರು. ಶ್ರೀಮತಿ ವಿಜಯ ಶೆಟ್ಟಿ ಸಾಲೆತ್ತೂರು ಇವರು ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ನಂತರ ‘ಚೂಡಾಮಣಿ’ ಎಂಬ ಆಖ್ಯಾನದ ತಾಳಮದ್ದಳೆಯು ಪ್ರದರ್ಶನಗೊಂಡಿತು.

error: Content is protected !!
Share This