ಭಗವದ್ಗೀತೆಯ ಸಾರ ಎಲ್ಲ ಜನರನ್ನು ತಲುಪಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಶ್ರೀ ಭಗವದ್ಗೀತಾ ಅಭಿಯಾನ – 2018 ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಿರಿಯ ಅರ್ಥಧಾರಿಗಳಾದ ಡಾ| ಪ್ರಭಾಕರ ಜೋಶಿ ಅವರನ್ನು ಸಮ್ಮಾನಿಸಲಾಯಿತು. ಭಗವದ್ಗೀತೆಯಲ್ಲಿ ಎಲ್ಲವೂ ಹೇಳಲ್ಪಟ್ಟಿದೆ. ನಮ್ಮ ಕರ್ಮವನ್ನು ನಾವು ಮಾಡಬೇಕು. ಎಲ್ಲವನ್ನೂ ದೇವರು ಕೊಡುತ್ತಾನೆಂದು ಸುಮ್ಮನೆ ಕುಳಿತುಕೊಳ್ಳಬಾರದು. ನಾವು ಕಾರ್ಯಕರ್ತರಂತೆ ಕೆಲಸ ಮಾಡಿದರೆ ದೇವರ ಅನುಗ್ರಹ ಇರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕಲಾಸಂಗಮ ಚಾರಿಟೆಬಲ್ ಟ್ರಸ್ಟಿನ ಲಾಂಛನವನ್ನು ಹಿರಿಯ ಲೆಕ್ಕಪರಿಶೋಧಕ ಎಸ್. ಎಸ್. ನಾಯಕ್ ಅವರು ಬಿಡುಗಡೆಗೊಳಿಸಿದರು. ಉದ್ಯಮಿ ಉಮೇಶ ಹೆಗಡೆ, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.
ಕಲಾಸಂಗಮ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಅತಿಥಿಗಳನ್ನು ಸ್ವಾಗತಿಸಿ, ಸುಧಾಕರರಾವ್ ಪೇಜಾವರ ನಿರೂಪಿಸಿದರು. ಅನ್ನಪೂರ್ಣಾ ವಂದಿಸಿದರು. ಅನಂತರ ಸಾಮೂಹಿಕ ಶ್ರೀ ಭಗವದ್ಗೀತಾ ಶ್ಲೋಕಗಳ ಪಠನ ನಡೆಯಿತು. ಬಾಲಕಲಾವಿದ ಆರುಷ್ ಶೆಟ್ಟಿಯವರಿಂದ ಶ್ರೀ ಕೃಷ್ಣ ಲೀಲಾಮೃತಂ ಯಕ್ಷಗಾನ ನೃತ್ಯ ರೂಪಕ ನಡೆಯಿತು.

error: Content is protected !!
Share This