ದಿ. 28/1/18ರಂದು ಶರಭೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರೀಯವರಿಂದ ಉದ್ಘಾಟನೆಗೊಂಡಿತು. ಶ್ರೀ ಮದುಸೂಧನ ಅಯಾರರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡ ಈ ಸಮಾರಂಭದಲ್ಲಿ ಶ್ರೀ ಎಚ್. ಸಂಜೀವರಾವ್ ಅವರನ್ನು ಶೇಣಿ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಈ ಸಮಾರಂಭದಲ್ಲಿ ಶ್ರೀ ನವನೀತ ಶೆಟ್ಟಿ ಕದ್ರಿಯವರು ಶೇಣಿ ಸಂಸ್ಮರಣ ಭಾಷಣವನ್ನು ಮಾಡಿದರು. ಪಿ. ವಿ. ರಾವ್ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರೆ ಶ್ರೀ ಸುಧಾಕರರಾವ್ ಪೇಜಾವರ ಅವರು ಸ್ವಾಗತಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರರು ಉಪಸ್ತಿತರಿದ್ದ ಈ ಕಾರ್ಯಕ್ರಮದಲ್ಲಿ ಮಹಾಬಲಶೆಟ್ಟಿ ಕೂಡ್ಲು ಇವರು ಧನ್ಯವಾದ ಸಮರ್ಪಣೆ ಮಾಡಿದರು.

ಬಳಿಕ ಹರಿದಾಸ ವಾದೀಶ ಆಚಾರ್ಯರಿಂದ ಶ್ರೀಮತಿ ಪರಿಣಯ ಎಂಬ ಆಖ್ಯಾನದ ಹರಿಕಥೆಯು ನೆರವೇರಿತು. ಶ್ರೀರಾಮ ಚರಿತಾಮ್ರ್ ತಂ ಎಂಬ ಶಿಶ್ರಿಕೆಯಲ್ಲಿ ನಡೆಯುವ ಈಹರಿಕಥಾ ಕಾರ್ಯಕ್ರಮ ಫೆ. 11ರ ವರೆಗೆ ನಿತ್ಯ ಸಂಜೆ ಐದು ಗಂಟೆಯಿಂದ ಎಂಟು ಗಂಟೆಯ ವರೆಗೆ ನಡೆಯಲಿದೆ.

error: Content is protected !!
Share This