ಹಿರಿಯ ಯಕ್ಷಗಾನ ಕಲಾವಿದ ಎಚ್ ಕೆ ವೆಂಕಟರಾಮಯ್ಯ (78) ಅವರು ಫೆ. 8 ರಂದು ಚಿಕ್ಕಮಗಳೂರು ಜಿಲ್ಲೆಯ ಹಳ್ಳದಾಚೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅವರು ಸ್ತ್ರೀ ವೇಷಧಾರಿಯಾಗಿ ಪ್ರಭಾವತಿ, ಚಿತ್ರಾಂಗದೆ, ಪ್ರಮೀಳೆ, ಮೀನಾಕ್ಷಿ, ಅಂಬೆ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು, ಬಳಿಕ ಪುರುಷ ವೇಷಗಳನ್ನು ನಿರ್ವಹಿಸುತ್ತಿದ್ದರು. ಚಂಡಿಕೇಶ್ವರ, ಕುಂಡಾವು, ಕೂಡ್ಲು, ಮಂದಾರ್ತಿ, ಪುತ್ತೂರು, ಮೂಲ್ಕಿ, ಸಾಲಿಗ್ರಾಮ, ಮಾರಣಕಟ್ಟೆ, ಬಾಳೆಹೊಳೆ ಮೇಳಗಳಲ್ಲಿ 25 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು.

ಮೂಲತಃ ಬಡಗು ಕಲಾವಿದರಾಗಿದ್ದರೂ ತೆಂಕುತಿಟ್ಟಿನಲ್ಲೂ ವೇಷ ಮಾಡುತ್ತಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಹಾಗೂ ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ ಅವರಿಗೆ ಲಭಿಸಿತ್ತು. ಅವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಳಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Share This