ರಂಗಸ್ಥಳದ ರಾಜ ನಾಗಿ ಮೆರೆದ, ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದರಾದ ದಿ. ಮೂಡುಬಿದಿರೆ ಮಾಧವ ಶೆಟ್ಟರು 60 ವರ್ಷಗಳಿಗೂ ಅಧಿಕ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಪೀಠಿಕೆ ವೇಷ, ಎದುರು ವೇಷ, ರಾಜಬಣ್ಣ, ಹೆಣ್ಣುಬಣ್ಣ – ಹೀಗೆ ಯಕ್ಷಗಾನದ ಎಲ್ಲಾ ಪಾತ್ರಗಳಲ್ಲಿ ಪ್ರಸಿದ್ಧಿ ಹೊಂದಿದವರು. ರಂಗ ನಡೆಯ ಸಮಗ್ರ ಜ್ಞಾನ ಹೊಂದಿದ್ದು ನೂರಾರು ಶಿಷ್ಯರನ್ನು ಹೊಂದಿದ್ದ ಮಹಾನ್ ಕಲಾವಿದರು. ನಮ್ಮೂರಾದ ಮೂಡುಬಿದಿರೆಯ ಈ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯಬೇಕು ಎಂಬ ಅಪೇಕ್ಷೆ ಹೊಂದಿರುವ ಅವರ ಮಕ್ಕಳು, ಕುಟುಂಬಸ್ಥರು.

ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣಾ ವೇದಿಕೆ – ಶಿಮಂತೂರು ಸ್ಥಾಪಿಸಿ ಆ ಮೂಲಕ ಪ್ರತಿ ವರ್ಷ ಮಾಧವ ಶೆಟ್ಟಿ ಪ್ರಶಸ್ತಿ ನೀಡಲು ಉದ್ದೇಶಿಸಿದ್ದಾರೆ. ಈ ಸಾಲಿನ ಪ್ರಶಸ್ತಿಯನ್ನು ಮಾಧವ ಶೆಟ್ಟರ ಒಡನಾಡಿಗಳಾಗಿದ್ದು, ಅವರೊಂದಿಗೆ ತಿರುಗಾಟ ನಡೆಸಿರುವ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಕೆ‌.ಎಚ್. ದಾಸಪ್ಪ ರೈ ಯವರಿಗೆ ನೀಡಲಾಗುವುದು.

21.05.2019 ನೇ ಮಂಗಳವಾರ ಮಧ್ಯಾಹ್ನ 3.30 ಕ್ಕೆ ಮೂಡಬಿದಿರೆ ಸಮಾಜ ಮಂದಿರದಲ್ಲಿ ಯಕ್ಷಸಂಗಮ – ಮೂಡಬಿದಿರೆಯ ಆಶ್ರಯದಲ್ಲಿ ಸಮಾಜ ಮಂದಿರ ಸಭಾ (ರಿ) ಮೂಡಬಿದಿರೆಯ ಸಹಕಾರದಲ್ಲಿ ಮೂಡಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ – ಜಾಂಬವತೀ ಕಲ್ಯಾಣ ಯಕ್ಷಗಾನ ಜರಗಲಿದೆ. ಸರ್ವ ಯಕ್ಷಗಾನ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿಸುತ್ತಿದ್ದೇವೆ.

ಮೂಡಬಿದಿರೆ ಮಾಧವ ಶೆಟ್ಟಿ ಸಂಸ್ಮರಣಾ ವೇದಿಕೆ, ಶಿಮಂತೂರು

♦ ಯಕ್ಷಸಂಗಮ – ಮೂಡಬಿದಿರೆ

error: Content is protected !!
Share This