ಮೇ 19 ರಿಂದ ಮೇ 25ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ-2019 ‘ಹರಿಭಕ್ತಿ ಪಾರಮ್ಯ’ ಸಂಪನ್ನಗೊಂಡಿತು. ಮೇ 19 ರಂದು ತಾಳಮದ್ದಲೆ ಸಪ್ತಾಹವನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪ್ರತಿ ದಿನ ಕ್ರಮವಾಗಿ ಧ್ರುವ, ಪ್ರಹ್ಲಾದ, ಅಂಬರೀಶ, ರುಕ್ಮಾಂಗದ, ಜಟಾಯು-ಶಬರಿ-ಹನುಮಂತ, ಅತಿಕಾಯ, ಧರ್ಮರಾಯ-ಭೀಷ್ಮ ಪ್ರಸಂಗಗಳು ಕೇಳುಗರಿಗೆ ಮುದವನ್ನು ನೀಡಿದವು. ಸಮಾರೋಪ ಸಮಾರಂಭ ಮೇ 25 ರಂದು ಜರಗಿತು. ಈ ಸಂದರ್ಭದಲ್ಲಿ ತಾಳಮದ್ದಲೆ ಅರ್ಥಧಾರಿಗಳಿಗೆ ಕೊಡಲ್ಪಡುವ ಮಟ್ಟಿ ಮುರಲೀಧರ ರಾವ್ ಪ್ರಶಸ್ತಿಯನ್ನು ಕೆ.ವಿ ಗಣಪಯ್ಯ ಹಾಗೂ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ನೇವಣಿ ಗಣೇಶ್ ಭಟ್ ಇವರಿಗೆ ಪ್ರದಾನ ಮಾಡಲಾಯಿತು.

error: Content is protected !!
Share This