ಬೆಳುವಾಯಿ ಶ್ರೀ ಯಕ್ಷದೇವ ಮಿತ್ತಕಲಾ ಮಂಡಳಿ (ರಿ.) ಯು ಆರಂಭಿಸಲು ಉದ್ದೇಶಿಸಿರುವ
“ಶ್ರೀ ಯಕ್ಷದೇವ” ಯಕ್ಷಗಾನ ನಾಟ್ಯ- ಚೆಂಡೆ ಮದ್ದಳೆ ತರಗತಿಯನ್ನು ವಿಜಯದಶಮಿಯ ದಿನಾಂಕ-19-10-2018 ನೇ ಶುಕ್ರವಾರ ಪೂರ್ವಾಹ್ನ ಗಂಟೆ 9:30 ಕ್ಕೆ
ದೀಪ ಬೆಳಗಿಸಿ ಉದ್ಘಾಟನೆಗೊಳಿಸುವ ಮೂಲಕ ಆರಂಭಿಸಲಾಗುವುದು.

ಈ ಸಮಾರಂಭದಲ್ಲಿ ಮುಖ್ಯವಾಗಿ ಯಕ್ಷಗಾನದ ಹಿರಿಯ ವಿದ್ವಾಂಸರು, ವಿಮರ್ಶಕರು, ಲೇಖಕರು, ಅರ್ಥಧಾರಿಯಾದ ಡಾ| ಎಂ. ಪ್ರಭಾಕರ ಜೋಶಿಯವರು ದೀಪ ಪ್ರಜ್ವಲನಗೊಳಿಸಲಿರುವರು.

ಅಧ್ಯಕ್ಷರಾಗಿ ಸ್ಥಳೀಯ ಉದ್ಯಮಿ, ಕಲಾಪೋಷಕರಾದ ಭಾಸ್ಕರ್ ಎಸ್ ಕೋಟ್ಯಾನ್, ಪಂಚಾಯತ್ ಅಧ್ಯಕ್ಷರಾದ ಭಾಸ್ಕರ ಆಚಾರ್ಯ, ಅತಿಥಿ ಗಣ್ಯರಾಗಿ ವಕೀಲರು, ಗುರುನಾರಾಯಣ ಮಂದಿರದ ಅಧ್ಯಕ್ಷರಾದ ರಾಜೇಶ್ ಸುವರ್ಣ, ನಾಟ್ಯಗುರುಗಳಾದ ಮಹಾವೀರ ಪಾಂಡಿ ಕಾಂತಾವರ, ಕಲಾವಿದರಾದ ಅಕ್ಷಯ್ ಮಾರ್ನಾಡ್, ನಿವೃತ್ತ ಶಿಕ್ಷಕ, ಕಲಾವಿದ ಶ್ಯಾಮ್ ಹೆಗ್ಡೆ ಬೆಳುವಾಯಿ ಭಾಗವಹಿಸಲಿರುವರು.

ಸಂಸ್ಥೆಯ ಸ್ಥಾಪಕಾಧ್ಯಕ್ಷರು ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಗುರುಗಳಾದ ಎಮ್. ದೇವಾನಂದ ಭಟ್ ಇವರ ನಿರ್ದೇಶನದಂತೆ ಪ್ರತಿವಾರದ ಶನಿವಾರ ಸಂಜೆ 4 ರಿಂದ ತರಗತಿ ಆಯೋಜಿಸಲಾಗಿದೆ.

ಸಹಕಾರ್ಯದರ್ಶಿ
ರಂಜಿತ್ ಆಚಾರ್ಯ ಬೆಳುವಾಯಿ
ಮೋ:9972239986
9945954141

error: Content is protected !!
Share This