ದಿನಾಂಕ 21/01/2018ರಂದು ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಶತಮಾನೋತ್ಸವದ 57ನೇ ಕಾರ್ಯಕ್ರಮವು ಸಂಪನ್ನಗೊಂಡಿತು.

 ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ಜಯರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಬಜಿಪೆಯ ಹೋಟೆಲ್ ಶಾಂತಿ ಭವನದ ಮಾಲಕರಾದ ಶ್ರೀ ರಾಘವೇಂದ್ರ ಆಚಾರ್ ಹಾಗು ಶ್ರೀ ಕ್ಷೇತ್ರದ ಪ್ರದಾನ ಅರ್ಚಕರಾದ ಶ್ರೀ ಕೃಷ್ಣ ಭಟ್ ಉಪಸ್ಥಿತರಿದ್ದರು.

ಶೇಣಿ ಶತಮಾನೋತ್ಸವ ಪ್ರಶಸ್ತಿ ಸ್ವೀಕರಿಸುತ್ತ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಕಲಾಭಿಮಾನಿ ಶ್ರೀ ರತ್ನಾಕರ ಕಂಬುಳಿಯವರು ಮಾತನಾಡುತ್ತ ಭಿನ್ನ ಭಿನ್ನ ಗುಣಮಟ್ಟದ ಸಭಾಸದರ ಸಮ್ಮುಖದಲ್ಲಿ ಒಂದೇ ಪಾತ್ರವನ್ನು ಭಿನ್ನ ಭಿನ್ನ ರೀತಿಯಲ್ಲಿ ಪ್ರತಿಪಾದಿಸುತ್ತಿದ್ದ ಮಹಾನ್ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ಟರು, ಅವರ ಹೆಸರಿನಲ್ಲಿ ಕೊಡ ಮಾಡಿದ ಈ ಪ್ರಶಸ್ತಿಯು ನನಗೆ ಅತೀವವಾದ ಆನಂದವನ್ನು ತಂದು ಕೊಟ್ಟಿದೆ. ಇನ್ನು ಮೇಲೆ ಯಾವುದೇ ಪ್ರಶಸ್ತಿ ಯ ಸಮ್ಮಾನದ ಬಯಕೆ ನನಗಿಲ್ಲ ಎಂದು ಹೇಳಿದರು. ಶೇಣಿ ಸಂಸ್ಮರಣ ಭಾಷಣವನ್ನು ಹಿರಿಯ ಹರಿದಾಸ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ಇವರು ಮಾಡಿದರೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ  ಉಲ್ಲಾಸ್ ಶೆಟ್ಟಿ ಪೆರ್ಮುದೆ ಇವರು ಸಮ್ಮಾನಿತರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿದ್ದು ವೇ.ಮು.ರಾಧಾಕೃಷ್ಣ ತಂತ್ರಿಯವರು ಆಶೀರ್ವಚನದ ಮಾತುಗಳನ್ನಾಡಿದರು. ಪಿ.ವಿ.ರಾವ್  ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರೆ, ಪೊರ್ಕೋಡಿ ಸುನೇತ್ರ  ಶೆಟ್ಟಿಯವರು ಧನ್ಯವಾದ ಸಮರ್ಪಣೆ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ‘ಕರ್ಣ ಭೇದನ’ ಎಂಬ ಆಖ್ಯಾನದ ತಾಳಮದ್ದಳೆಯು ಪ್ರದರ್ಶನಗೊಂಡಿತು.

error: Content is protected !!
Share This