ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಶ್ರೀ ರಾಮ ಚರಿತಂ” ಎಂಬ ಶೀರ್ಷಿಕೆಯಲ್ಲಿ, ಮಂಗಳೂರಿನ ಶರವು ದೇವಸ್ಥಾನದಲ್ಲಿ ದಿನಾಂಕ 11/02/18ರಂದು ಸಮಾರೋಪಗೊಂಡಿತು.

ಶ್ರೀ ಕ್ಷೇತ್ರದ ಶಿಲಶಿಲಾ ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಹರಿದಾಸ ಶ್ರೀ ಅಂಬಾತನಯಮುದ್ರಾಡಿಯವರನ್ನು ಶೇಣಿ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ಯಕ್ಷಗಾನ ಕಲಾವಿದ ಡಾ.ಪ್ರಭಾಕರ್ ಜೋಶಿ ಅವರು ಶೇಣಿ ಸಂಸ್ಮರಣಾ ಭಾಷಣವನ್ನು ಮಾಡಿದರೆ, ಪಿ.ವಿ.ರಾವ್ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಒಡಿಯೂರು ಮಠದ ಸಾದ್ವಿ ಶ್ರೀ ಶ್ರೀ ಮತಾನಂದಮಯಿ ಆಶೀರ್ವಚನದ ಮಾತುಗಳನ್ನು ಆಡುತ್ತ ದಿ.ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾರ್ಥವಾಗಿ “ಶ್ರೀರಾಮ ಚರಿತಂ” ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀ ಶರವು ಕ್ಷೇತ್ರದಲ್ಲಿ ನಿರಂತರ 15 ದಿವಸಗಳ ಕಾಲ ಹರಿಕಥಾ ಪಕ್ಷೋತ್ಸವವನ್ನು ನಡೆಸಿದುದು ಶ್ಲಾಘನೀಯ. ಇಂತಹದೇ ಧಾರ್ಮಿಕ ಕಾರ್ಯಕ್ರಮಗಳನ್ನು ದಿ.ಶೇಣಿಯವರಂತಹ ಸಂಸ್ಮರಣಾರ್ಥವಾಗಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಅಲ್ಲಲ್ಲಿ ನಡೆಸುವಂತೆ ಶ್ರೀ ರಾಮನು ಅನುಗ್ರಹಿಸಲಿ ಎಂದು ಹೇಳಿದರು.

ಟ್ರಸ್ಟಿನ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ,ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ಇವರು ಉಪಸ್ಥಿತರಿದ್ದ ಈ ಸಮಾರಂಭವು ಶ್ರೀ ಸುಧಾಕರ ರಾವ್ ಪೇಜಾವರ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಪರಿಸಮಾಪ್ತಿಗೊಂಡಿತು.

ಬಳಿಕ ಹರಿದಾಸ ಅಂಬಾತನಯ ಮುದ್ರಾಡಿಯವರು ಶ್ರೀಗಳಾದ ಅನಂತ ಪದ್ಮನಾಭ ಕಾರ್ಕಳ, ರಮೇಶ ಹೆಬ್ಬಾರ್ ಹಾಗೂ ಪ್ರದೀಪ್ ಕಲ್ಲುರಾಯ ಇವರ ಸಹಕಾರದೊಂದಿಗೆ “ಶ್ರೀ ರಾಮ ನಿರ್ಯಾಣ” ಎಂಬ ಆಖ್ಯಾನದ ಹರಿಕಥೆಯನ್ನು ಪ್ರಸ್ತುತ ಪಡಿಸಿದರು. ನೆರೆದ ನೂರಾರು ಭಗವತ್ ಭಕ್ತರು ಈ ಹರಿಕಥಾ ಪಕ್ಷೋತ್ಸವವನ್ನು ಪ್ರಶಂಶಿಸಿ ಭಾವಪರವಶರಾಗಿ ಟ್ರಸ್ಟಿಗೆ ಹಾಗೂ ಪರಿಷತ್ತಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

error: Content is protected !!
Share This