
ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ 5 ದಿನಗಳ ವೇಷಗಾರಿಕೆ ಗಾರಿಕೆ ಕಮ್ಮಟ ಇಂದು 13.05.2023 ಶ್ರೀ ಜನಾರ್ದನ ಮಂಟಪದಲ್ಲಿ ಸಮಾಪನಗೊಂಡಿತು. ನರಸಿಂಹ ತುಂಗ ಮತ್ತು ಮಿಥುನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ 20 ವಿದ್ಯಾರ್ಥಿಗಳು ವಿವಿಧ ವೇಷಗಳ ಮುಖವರ್ಣಿಕೆ ಮಾಡುವುದು ಮತ್ತು ಕಿರೀಟ ಕಟ್ಟಿಕೊಳ್ಳುವ ಕೌಶಲವನ್ನು ಈ ಶಿಬಿರದಲ್ಲಿ ತಿಳಿದುಕೊಂಡರು. ಸಮಾರೋಪ ಸಮಾರಂಭದಲ್ಲಿ ಶ್ರೀ ವಿಜಯಕುಮಾರ್ ಮುದ್ರಾಡಿ, ಶ್ರೀಮತಿ ವಿದ್ಯಾ ಪ್ರಸಾದ್ ಹಾಗೂ ಶ್ರೀ ಗೋವಿಂದ ಭಂಡಾರಿ ಪಾಲ್ಗೊಂಡರು. ಶ್ರೀ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರದ್ಧೆಯಿಂದ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಮಾತನಾಡಿ ಮುಂದೆ ಪ್ರತಿ ಭಾನುವಾರ ಯಕ್ಷಗಾನ ನೃತ್ಯ ಅಭಿನಯ ಮತ್ತು ವೇಷಗಾರಿಕೆ ತರಗತಿಗಳು ಜರುಗಲಿವೆ ಎಂದು ತಿಳಿಸಿದರು. ಶಿಬಿರಾರ್ಥಿಗಳ ಪರವಾಗಿ ಶೈಲೇಶ್, ಮಾನ್ಯ, ಅದಿತಿ ಹಾಗೂ ಶ್ರಾವ್ಯ ತಮ್ಮ ಶಿಬಿರದ ಅನುಭವವನ್ನು ವ್ಯಕ್ತಪಡಿಸಿ, ಈ ಶಿಬಿರವು ಅಮೂಲ್ಯವಾದ ಅನುಭವವನ್ನು ನೀಡಿದೆ ಎಂದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.



