ಹಿರಿಯ ಸಾಹಿತಿ, ಶಿಕ್ಷಕ, ಹರಿದಾಸ,ಜಿನದಾಸ, ಅರ್ಥಧಾರಿ, ಕಲಾವಿದ, ನಾಟಕಕಾರ ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ ಎಲ್ಲ ಸಂಘಟನೆಗಳ ಸಹಯೋಗದೊಂದಿಗೆ ಇಂದು (27-02-2023) ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.

ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿಯವರು ತಾನು ಅಂಬಾತನ ಮುದ್ರಾಡಿಯವರೊಂದಿಗೆ ಕಳೆದ ದಿನಗಳು ಸ್ಮರಣೀಯವಾದುದು. ಧರ್ಮರಾಯ, ವಿದುರ, ಅಕ್ರೂರ ಮುಂತಾದ ಸಾತ್ವಿಕ ಪಾತ್ರಗಳನ್ನು ಅಂಬಾತನಯರು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದರು. ಅಂಬಾತನಯ ರಂತಹ ಸರಳ,ಸಜ್ಜನಿಕೆಯ ಸಾತ್ವಿಕ ವ್ಯಕ್ತಿಗಳನ್ನು ತಾನು ಕಂಡದ್ದು ವಿರಳ. ತೀವ್ರ ಅನಾರೋಗ್ಯದ ನಡುವೆಯೂ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಿದ್ದುದು ಕಲೆ ಮತ್ತು ಸಮಾಜದ ಬಗ್ಗೆ ಅವರಿಗಿರುವ ಗಾಢವಾದ ಪ್ರೀತಿಯ ದ್ಯೋತಕವಾಗಿದೆ. ವೈಯಕ್ತಿಕವಾಗಿ ಅವರ ಅಗಲಿಕೆ ನನಗೆ ದೊಡ್ಡ ನಷ್ಟ ಎಂದು ನುಡಿದರು. ನೀಲಾವರ ಸುರೇಂದ್ರ ಅಡಿಗ, ಬೆಳಗೋಡು ರಮೇಶ್ ಭಟ್,ಶ್ರೀಮತಿ ಪೂರ್ಣಿಮಾ,
ಎಸ್. ವಿ. ಭಟ್, ಪ್ರೊ. ಹಿರಿಯಡ್ಕ ಮುರಲೀಧರ ಉಪಾಧ್ಯ,ಡಾ.ಪಾದೆಕಲ್ಲು ವಿಷ್ಣು ಭಟ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿ. ಭುವನಪ್ರಸಾದ್ ಹೆಗ್ಡೆ, ಡಾ. ಬಿ. ಜಗದೀಶ್ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, , ಗಿರೀಶ್ ಶೆಟ್ಟಿಗಾರ್,ಎ. ನರಸಿಂಹ ರವಿರಾಜ್, ಎಂ. ಗಂಗಾಧರ ರಾವ್, ಪ್ರದೀಪಚಂದ್ರ ಕುತ್ಪಾಡಿ, ಪ್ರೊ. ಎಂ.ಎಲ್ ಸಾಮಗ, ವಿಶ್ವನಾಥ ಶೆಣೈ, ಪೂರ್ಣಿಮಾ ಸುರೇಶ್, ಶ್ರೀಮತಿ ಶ್ರೀ ಮುದ್ರಾಡಿ ಅಂಬಾತನಯ ಮುದ್ರಾಡಿಯವರ ಒಡನಾಟದ ನೆನಪುಗಳನ್ನು ಸ್ಮರಿಸಿಕೊಂಡರು. ವಿಜಯ ಕುಮಾರ್ ಮುದ್ರಾಡಿಯವರು ಧನ್ಯವಾದ ಸಲ್ಲಿಸಿದರು. ಮುರಲಿ ಕಡೆಕಾರ್ ಮುದ್ರಾಡಿಯವರ ಕುರಿತು ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಶ್ರಾವ್ಯ ಬಾಸ್ರೀ ಮತ್ತು ಎ.ಪಿ ಪಾಠಕ್ ಗಾಯನ ನಮನ ಸಲ್ಲಿಸಿದರು.

error: Content is protected !!
Share This