ಯಕ್ಷಗಾನ ಭಾಗವತಿಕೆ ಹಾಗೂ ಸಂಗೀತದಲ್ಲಿ ಅಪಾರ ಜ್ಞಾನ ಹೊಂದಿದ್ದ, ತಾಲ್ಲೂಕಿನ ತಿಮ್ಮಪ್ಪ ಭಾಗವತ ಬಾಳೆಹದ್ದ (59), ಎರಡು ಕಾರುಗಳ ನಡುವೆ ನಡೆದ ಅಪಘಾ ತದಲ್ಲಿ ಮಂಗಳವಾರ ಸಂಜೆ ನಿಧನರಾದರು. ತಾಲ್ಲೂಕಿನ ಹಿತ್ಲಳ್ಳಿ ಬಳಿ ಅವರಿದ್ದ ಕಾರಿಗೆ, ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಗಂಭೀರ ಸ್ವರೂಪದಿಂದ ಗಾಯಗೊಂಡಿದ್ದರು.

ತಂದೆ, ಪ್ರಸಿದ್ಧ ಭಾಗವತರಾಗಿದ್ದ ಕೃಷ್ಣ ಭಾಗವತ ಅವರ ಬಳಿ ಭಾಗವತಿಕೆ ಕಲಿತ ಇವರು, ಬಾವ ಶ್ರೀ ಪಾದ ಹೆಗಡೆ ಕಂಪ್ಲಿ ಅವರ ಬಳಿ ಸಂಗೀತ ಜ್ಞಾನ ಪಡೆದಿದ್ದರು. ಹೊಸ್ತೋ ಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದ ಇವರು ಸೋಂದಾದ ಯಕ್ಷಗಾನ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ರಂಗಭೂಮಿಗೆ ಸಂಗೀತ ನೀಡುತ್ತಿದ್ದ ಇವರು ರಂಗಾಯಣದ ಮೂಲಕ ಖೈದಿಗಳಿಗೆ ನಾಟಕ ಕಲಿಸುವ ತಂಡದಲ್ಲಿ ಸಕ್ರಿಯರಾಗಿದ್ದರು. ಇವರಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.

error: Content is protected !!
Share This