ಜಿಲ್ಲೆಯ ಹಿರಿಯ ಸಾಮಾಜಿಕ ಧುರೀಣ, ಉದ್ಯಮಿ, ತೊಂಭತ್ತರ ದಶಕದ ಅಪರೂಪದ ಯಕ್ಷಗಾನ ಅರ್ಥಧಾರಿ – ವೇಷಧಾರಿ ಸರಳ – ಸಜ್ಜನ ಸ್ನೇಹ ಜೀವಿ ಜೋಕಟ್ಟೆ ಮಹಮ್ಮದ್ ಅವರು ನಿನ್ನೆ ನಿಧನರಾದ ವಾರ್ತೆ ಬಂತು.

ಶೇಣಿಯವರಂತಹ ಹಿರಿಯರ ಸಾಂಗತ್ಯದಲ್ಲಿ ಯಕ್ಷಗಾನ ಕಲಾಸಕ್ತಿಯನ್ನು ಬೆಳೆಸಿಕೊಂಡು ಹಿರಿಯ – ಕಿರಿಯ ಅರ್ಥಧಾರಿಗಳ ಕೂಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಜನಾಬ್ ಮಹಮ್ಮದ್ ಅವರ ವಿಜಯದ ಭೀಷ್ಮನ ಪಾತ್ರ ಜಯಭೇರಿ ಗಳಿಸಿತ್ತು.

ಜೋಕಟ್ಟೆಯವರ ನಿಧನದಿಂದ ನಮ್ಮ ನಡುವಿನ ಸಾಮರಸ್ಯದ ಸಾಮಾಜಿಕ – ಸಾಂಸ್ಕೃತಿಕ ಕೊಂಡಿಯೊಂದು ಕಳಚಿದಂತಾಯ್ತು. ಅವರಿಗೆ ಸಮಸ್ತ ಯಕ್ಷಗಾನ ಅಭಿಮಾನಿಗಳ ಪರವಾಗಿ ಯಕ್ಷಾಂಗಣದ ಶ್ರದ್ಧಾಂಜಲಿ – ಕಾರ್ಯಾಧ್ಯಕ್ಷ, ಯಕ್ಷಾಂಗಣ ಮಂಗಳೂರು

error: Content is protected !!
Share This