- ಡಿ. ಎಸ್. ಶ್ರೀಧರ
ಪ್ರೊ|ಅಮೃತರು ಅಸ್ತಂಗತರಾದರು ಎಂಬ ವರ್ತಮಾನ ಬಂದಾಗ ಅನ್ನಿಸಿದ್ದು.ಕರಾವಳಿ ಕರ್ನಾಟಕ ಸಾಹಿತ್ಯ ಕ್ಷೇತ್ರದ ಅತ್ಯಂತ ಸಮರ್ಥರೊಬ್ಬರನ್ನು ಕಳೆದುಕೊಂಡೆವು…ಎಂದು.
ಅವರನ್ನು ಮನೆಯಲ್ಲಿ ಕಂಡು ಮಾತಾಡಿಸಬೇಕೆಂಬ ಇಚ್ಛೆ ಉಳಿದೇಹೋಯಿತು.ಕಳೆದವರ್ಷ ಅವರು ಪತ್ರ ಬರೆದು ಪ್ರಸಂಗ ಸಾಹಿತ್ಯದ ರಚನೆಯನ್ನು ಬಿಡದೆ ಮುಂದುವರಿಸಿ ಎಂದು ಹುರಿದುಂಬಿಸಿದ್ದರು.. ಧರ್ಮಸ್ಥಳ ಮೇಳದಲ್ಲಿ ಪ್ರದರ್ಶಿತವಾಗುತ್ತಿದ್ದ ಅವರ ಹಲವು ಪ್ರಸಂಗಗಳು ಅವರನ್ನು ಯಕ್ಷಲೋಕಕ್ಕೆ ವಿಶಿಷ್ಟವಾಗಿ ಪರಿಚಯಿಸಿದ ಕೃತಿಗಳೇ. ತುಳು,ಕನ್ನಡ,ಭಾಷೆಗಳ ಸಾಹಿತ್ಯಕ್ಕೆ ಅವರು ನೀಡಿದ ಕೃತಿಗಳು ಇನ್ನೂರಕ್ಕೂ ಹೆಚ್ಚು! ವಿಮರ್ಶಾಪ್ರಧಾನವಾದ ಬರೆಹಗಳಾದುದರಿಂದ ಅಧ್ಯಯನದ ವ್ಯಾಪ್ತಿಯೂ ಬಹುವಿಸ್ತಾರ.ನನ್ನ ರೀತಿ ಅವರಿಗೆ ಸರಿ ಕಂಡುದರ ಬರೆಹ ಅದಾಗಿತ್ತು.ಇನ್ನವರು ನೆನಪು ಮಾತ್ರ….ಓಂ…ಶಾಂತಿಃ…