ಚಿಂತನೆಯ ಸೆಳಕು – ಸಾಂತ್ವನದ ಬೆಳಕುರಾಧಾಕೃಷ್ಣ ಕಲ್ಚಾರ್

ಆ ಲೋಚನ ವೀಕ್ಷಿಸಿದೆ. ಮೊದಲೇ ಕೆಲವು ಓದಿದ್ದೆನಷ್ಟೆ. ವಿಶಿಷ್ಟವಾದ ಗುಚ್ಛ. ಕಾವ್ಯದ ತುಣುಕುಗಳನ್ನು ಪೋಣಿಸಿ ವಿಸ್ತರಿಸಿದ ಪ್ರತಿಫಲನಾತ್ಮಕ ಲೋಚನ.ಹದವಾದ ಭಾಷೆ,ಅತಿಯಲ್ಲದ ನಿರೂಪಣೆ. ಎಲ್ಲ ಹಂತದ ಸಾಕ್ಷರರಿಗೆ ಓದಬೇಕೆನಿಸುವಂತಹುದು.

ಸೌಮ್ಯ ಓಟ, ಲಲಿತ ಸುಂದರ. ತಿದ್ದಿದ ಬರವಣಿಗೆ – ಅಂಕಣ ಬರಹ ಸರಣಿಗೆ ಸಮಸ್ಯೆಗಳಿವೆ – ಲೇಖಕರು ಅದನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಆಯ್ಕೆ, ಬಿತ್ತರ, ನಿಗಮನಗಳು ಸುರೇಖವಾಗಿವೆ. ಕಾವ್ಯಾನುಭವ, ಸ್ವಾನುಭವಗಳ ಪಾಕ ಸುಸಂಯೋಜಿತವಿದೆ. ನಿರ್ಮಿತ್ರನಿರಲು ಕಲಿ, ಜನಪ್ರಿಯತೆಯ ಗೀಳು, ನಿವೃತ್ತಿಯ ಅನಂತರ, ಕನಸುಗಳಿಲ್ಲದ ದಾರಿಯಲ್ಲಿ, ಇಷ್ಟುಕಾಲ ಒಟ್ಟಿಗಿದ್ದು, ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್, ಕಾನೂನುಪಾಲನೆ ಮತ್ತು ಪೀಡನೆ, ಆಯುಧ ಮತ್ತು ಬಳಸುವ ಚಪಲ, ಓಲಗಿಸಿ ಬಾಳ್ವುದೆ ಕಷ್ಟಂ,ಪಿರಿಯಣ್ಣಂಗೆರಗುವ ಎರಕಂ, ಸಸ್ಯಾಹಾರಿಯ ಸಂಕಷ್ಟಗಳು, ನೊಂದವರ ನೋವ…. ಒಂದೊಂದೂ ಖುಷಿಯಾಯ್ತು. ಚಂದು ಕೇಳ್ special. ಕ್ರೌಂಚವಧೆಯ ಶೋಕಗೀತೆ, ನೋ ಕಂಟ್ರಿ ಫಾರ್ ಓಲ್ಡ್ ಮೆನ್ (ಪುಸ್ತಕದ ಪುಟ ಸಂಖ್ಯೆಯೂ ಉದಾಹರಣೆ! ) ‘ಸ್ವದೇಶಿ ಪ್ರಜ್ಞೆ ಮತ್ತು ಗುಣಮಟ್ಟದ ಪ್ರಶ್ನೆ’ ವಿಭಿನ್ನ. ಇಡಿಯ ಸಂಕಲನ ಮೌಲ್ಯಚಾಲಕ.

ಕಾವ್ಯದ ಉಕ್ತಿಗಳನ್ನು ಬದುಕಿಗೆ, ಮೌಲ್ಯಸಂಘರ್ಷಗಳಿಗೆ ಅನ್ವಯಿಸಿದ ಈ ಬರಹಗಳು, ಸಾಮಾನ್ಯ ಓದುಗರಿಗೆ, ಮತ್ತು ವಿಶೇಷತಃ ಕನ್ನಡ ಅಧ್ಯಾಪಕ – ವಿದ್ಯಾರ್ಥಿವೃಂದಕ್ಕೆ ಸಾಹಿತ್ಯಾನುಸಂಧಾನಕ್ಕೆ ಮಾರ್ಗದರ್ಶಿಗಳಾಗಿವೆ.ಕಾವ್ಯದ ಪ್ರಯೋಜನ, ಪ್ರಸ್ತುತತೆ ಏನು ಎಂಬುದಕ್ಕೆ ಆನ್ವಯಿಕ ಉತ್ತರಗಳಾಗಿವೆ.

  • ಡಾ. ಎಂ. ಪ್ರಭಾಕರ ಜೋಶಿ
error: Content is protected !!
Share This