ನೂತನ ಕಟ್ಟಡದ ಲೋಕಾರ್ಪಣೆ
ಏಪ್ರಿಲ್ 21 ರಂದು ಉಡುಪಿಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್ ಟ್ರೈನಿಂಗ್ ಆಂಡ್ ರಿಸರ್ಚ್ ಸೆಂಟರ್ ಇದರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು (16-4-2024) ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಮಹಾ ಸ್ವಾಮೀಜಿಯವರಿಗೆ, ಸಂಸ್ಥೆಯ ಸ್ಥಾಪಕ ಸದಸ್ಯರಾದ ಪ್ರೊ.ಜಿ.ಆರ್.ರೈ, ಮಂಗಳೂರು ಇನ್ಫೋಸಿಸ್ ಪ್ರೇರಣಾದ ವರಿಷ್ಠರಾದ ವಾಸುದೇವ ಕಾಮತ್ ಹಾಗೂ ರವಿರಾಜ್ ಬೆಳ್ಮ, ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಷಿ, ಮಹಾ ದಾನಿಗಳಾದ ಪಿ.ಗೋಪಿನಾಥ ಪ್ರಭು ಮತ್ತು ಮಂಗಳೂರಿನ ಗಣ್ಯರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು.