ನೂತನ ಯಕ್ಷಗಾನ ಮೇಳ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಮಂಗಳೂರು ಮಹಾನಗರದ ಪ್ರಪ್ರಥಮ ಪ್ರದರ್ಶನವನ್ನು ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನೀಡಲಿದೆ.

ನವೆಂಬರ 30 ಸೋಮವಾರ ಸಂಜೆ 5.30 ರಿಂದ ರಾತ್ರಿ 11ರ ತನಕ ಚೌಕಿ ಪೂಜೆ,ಸಭಾ ಕಲಾಪ ಹಾಗೂ ” ಶ್ರೀ ವೀರಾಂಜನೇಯ ವೈಭವ” ಯಕ್ಷಗಾನ ಬಯಲಾಟ ಜರಗಲಿದೆ.

ಯಕ್ಷ ಬಳಗ ಕದ್ರಿ ಹತ್ತು ಸಮಸ್ತರು ಸೇವಾರ್ಥಿಗಳಾಗಿ ಕಾರ್ಯಕ್ರಮ ಸಂಯೋಜಿಸಿದ್ದಾರೆ. ಪಾವಂಜೆ ಮೇಳದ ಹಾಸ್ಯಗಾರ ಉಜಿರೆ ನಾರಾಯಣ ಹಾಸ್ಯಗಾರರಿಗೆ ಗಣ್ಯರಾದ ಪ್ರದೀಪ ಕುಮಾರ ಕಲ್ಕೂರ, ರತ್ನಾಕರ ಜೈನ್, ನಿತ್ಯಾನಂದ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಲೀಲಾಕ್ಷ ಕರ್ಕೆರ, ತಾರಾನಾಥ ಶೆಟ್ಟಿ ಬೋಳಾರ ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸಂಮಾನ ಜರಗಲಿದೆ.

ಉಜಿರೆ ನಾರಾಯಣ ಅವರು ಕಳೆದ 48 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸ್ತ್ರೀ, ಪುಂಡು ಹಾಗೂ ಹಾಸ್ಯ ಪಾತ್ರಗಳಲ್ಲಿ ಮೆರೆದವರು. ಸುಂಕದಕಟ್ಟೆ, ಕುಂಬ್ಳೆ, ಸುರತ್ಕಲ್, ಬಪ್ಪನಾಡು, ಕದ್ರಿ,ಮಂಗಳಾದೇವಿ, ಕರ್ನಾಟಕ, ಸಸಿಹಿತ್ಲು, ಕಟೀಲು ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ ಹಿರಿಯ ಕಲಾವಿದರು.

ಈ ಆಟ ದಲ್ಲಿ ಪರಂಪರೆಯ ಹನೂಮಂತನ ಒಡ್ಡೋಲಗ ವಿಶೇಷ ಆಕರ್ಶಣೆಯಾಗಿ ಮೂಡಿಬರಲಿದೆ ಎಂದು ಸಂಯೋಜಕರಾದ ಕದ್ರಿ ನವನೀತ ಶೆಟ್ಟಿ ಹಾಗೂ ಪ್ರದೀಪ ಆಳ್ವ ಕದ್ರಿ ತಿಳಿಸಿದ್ದಾರೆ.

error: Content is protected !!
Share This