ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ಆಚಾರ್ಯರು ನಾಡಿನಾದ್ಯಂತ ಪ್ರಸಿದ್ಧರು.25-03-1941ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ ‘ರಾಸವಿಲಾಸ’ಎಂಬ ಕೃತಿಯನ್ನು ರಚಿಸಿದ್ದರು.ತಾಯಿ ಯು.ಲಲಿತಾಲಕ್ಷ್ಮೀ ಕುಶಲಕಲೆಗಳಲ್ಲಿ ಪರಿಣಿತರು. ಮಗನ ಕಲಾ ಬದುಕಿಗೆ ಅಚ್ಚಳಿಯದ ಪ್ರಭಾವ ಬೀರಿದವರು. ಅಲ್ಲಿಂದ ಯಕ್ಷಗಾನ,ಕೋಲ,ನಾಗಮಂಡಲ,ಢಕ್ಕೆಬಲಿ ಮುಂತಾದ ಆರಾಧ್ಯ ಕಲೆಗಳಿಂದ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡವರು.

ವಿದ್ಯಾಭ್ಯಾಸ ಸಂಪಾದಿಸಿ
ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ,ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ವೃತ್ತಿ ಜೀವನ ಸಂಪಾದಿಸಿ
ಕುಂದಾಪುರದ ಭಂಡಾರ್ಕಸ್‍ ಕಾಲೇಜಿನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಆರಂಭಿಸ, ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು,ಕುಂದಾಪುರದ ಬಿ.ಬಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ಪೂರ್ಣ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆ ಸಂಪಾದಿಸಿ
ಅಧ್ಯಾಪನ ವೃತ್ತಿಗೆ ವಿದಾಯ ಹೇಳಿದ್ದರೂ ಸಾಹಿತ್ಯಿಕವಾಗಿ,ಸಾಂಸ್ಕೃತಿಕವಾಗಿ ಆಚಾರ್ಯರು ಇಂದಿಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮಾಧವ ಆಚಾರ್ಯರು ತಮ್ಮನ್ನು ಕಂಡುಕೊಂಡಿದ್ದು ಸಣ್ಣಕಥೆಗಳ ಮೂಲಕ.

ಕಥಾ ಸಂಕಲನಗಳು

ಬಾಗಿದ ಮರ
ಭಾಗದೊಡ್ಡಮ್ಮನ ಕಥೆ
ಅಪರಾಧ ಸಹಸ್ರಾಣಿ ಕಥೆ[೫]

ಪ್ರಬಂಧ ಸಂಕಲನಗಳು

ಬೆಳಕಿನೆಡೆಗೆ
ಹಾಡಿ
ನೀಡು ಪಾಥೇಯವನು
ಸೀಳು ಬಿದಿರಿನ ಸಿಳ್ಳು
ರಂಗಪ್ರಬಂಧಗಳು
ನೃತ್ಯ ಪ್ರಬಂಧಗಳು
ಯಕ್ಷಪ್ರಬಂಧಗಳು
ಸಾಹಿತ್ಯ ಸ್ಪಂದನ
ಲಘು ಬಿಗು ಪ್ರಬಂಧಗಳು

ಕವನ ಸಂಕಲನಗಳು

ರಂಗಸ್ಥಳದ ಕನವರಿಕೆಗಳು
ಹೂ ಮಿಡಿ ಹಾಡು
ನಾಟಕಗಳು

ಇದ್ದಕ್ಕಿದ್ದಂತೆ ನಾಟಕ
ಎದೆಯೊಳಗಣ ದೀಪ
ಗೋಡೆ
ಕೃಷ್ಣನ ಸೋಲು
ರಾಣಿ ಅಬ್ಬಕ್ಕ ದೇವಿ
ಗಾಂಧಾರಿ
ರಾಧೆ ಎಂಬ ಗಾಥೆ
ನೆನಪೆಂಬ ನವಿಲುಗರಿ

error: Content is protected !!
Share This