1970 ರ ದಶಕದಿಂದ ಮುಂಬಯಿ ಮಹಾನಗರಿಯಲ್ಲಿ ಯಕ್ಷಗಾನಕ್ಕಾಗಿಯೂ ಆರಾಧನಾ ಸಂಸ್ಥೆಗಳಿಗಾಗಿಯೂ ಬಲುಬಗೆಯ ಸಾರ್ವಜನಿಕ ಕೆಲಸ ವಹಿಸಿಕೊಂಡ ಎಚ್.ಬಿ.ಎಲ್.ರಾವ್ ಹೃದಯಾಘಾತದಲ್ಲಿ 22-5-2020 ರಂದು ಬೆಳಿಗ್ಗೆ ನಿಧನರಾದುದು ಕನ್ನಡ ಸಾಂಸ್ಕೃತಿಕ ರಂಗಕ್ಕಾಗಿರುವ ಬಲು ದೊಡ್ಡ ನಷ್ಟ.

ಎಚ್.ಬಿ.ಎಲ್.ರಾವ್ ಅವರಿಗೆ ಕಲಾರಂಗದ ವಿಶ್ವೇಶ ತೀರ್ಥ ಪ್ರಶಸ್ತಿ 2019

ಮುಂಬಯಿಯ ಕನ್ನಡಿಗರ ಸಾಂಸ್ಕೃತಿಕ ಕೇಂದ್ರಗಳಲ್ಲಿ ಮುಖ್ಯವಾದ ಗೋಕುಲದ ನವೀಕರಣದ ಅಂಗವಾಗಿ ಹೊರಬರುವ ಸ್ಮರಣಸಂಚಯದ ಬಗೆಗೆ ಕೆಲಸದಲ್ಲಿರುವಾಗಲೆ ಈ ಅಗಲಿಕೆ ಆಗಿರುವುದು ಕನ್ನಡಕ್ಕೆ ಆಗಿರುವ ಒಂದು ಆಘಾತವಾಗಿದೆ.

ದ್ವೈವಾರ್ಷಿಕ ಯಕ್ಷಗಾನ ಸಾಹಿತ್ಯ ಸಮ್ಮೇಳನ, ದ್ವಾರ್ಷಿಕ ತುಳು ಸಮ್ಮೇಳನ, ಯಕ್ಷಗಾನ ಪ್ರಸಂಗ ಸಂಪುಟಗಳ, ಗಣ್ಯ ವ್ಯಕ್ತಿಗಳ ಅಭಿನಂದನ ಗ್ರಂಥ ಸಂಪಾದನ ಇಂಥ ಕೆಲಸಗಳಲ್ಲಿ ಬಿಡುವರಿಯದೆ ದುಡಿಯುತ್ತ ಬಂದ ಎಚ್ ಬಿ ಎಲ್ ಅವರ ಅಗಲಿಕೆಯಿಂದ ಮುಂಬಯಿಯಲ್ಲಿ ಉಂಟಾಗಿರುವ ಶೂನ್ಯತೆಯನ್ನು ತುಂಬಲು ಒಬ್ಬರಲ್ಲ, ಹಲವು ಸಾಂಸ್ಕೃತಿಕ ದೈತ್ಯಶಕ್ತಿಗಳು ಮುಂಬರಬೇಕಾದೀತು. ಯಕ್ಷಗಾನದ ಸಮ್ಮೇಳನಗಳನ್ನು ಇನ್ನು ಹೊಸತನ ತರಲು ಇಲ್ಲ ಎನ್ನುವಷ್ಟು ನವೀನತೆಯಿಂದ ನಡೆಸಿದುದು ಒಂದು ಇತಿಹಾಸವೇ ಆಗಿರುತ್ತದೆ. ಅವರು ಬರಹಗಾರರಾಗಿಯೂ ಯಕ್ಷಗಾನ ಮುಖವರ್ಣಿಕೆ ದಾಖಲಾತಿ ಮೂಲಕವೂ ಅವರು ಪ್ರತಿಬಿಂಬ ಮೂಡಿಸಿದ್ದಾರೆ.

error: Content is protected !!
Share This