ಓದಿನ ವಿಸ್ತರಣೆಗೆ ಆಧುನಿಕ ತಂತ್ರಜ್ಞಾನದ ಮಾಧ್ಯಮ ಬಳಕೆಗೆ ಅನಿವಾರ್ಯವಾಗಿದ್ದು ವಿಕೀಪೀಡಿಯಾ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಲೇಖಕ ಡಾ. ಎಂ ಪ್ರಭಾಕರ ಜೋಷಿ ನುಡಿದರು. ಅವರು ಸುರತ್ಕಲ್ ಗೋವಿಂದದಾಸ ಕಾಲೇಜು ಗ್ರಂಥಾಲಯ ವಿಭಾಗ, ಭಾಷಾ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ, ಕರಾವಳಿ ವಿಕೀಮೀಡಿಯ ಯೂಸರ್ ಗ್ರೂಪ್, ಸೆಂಟರ್ ಫಾರ್ ಇಂಟರ್‍ನೆಟ್ ಆ್ಯಂಡ್ ಸೊಸೈಟಿ ಬೆಂಗಳೂರು ಸಹಯೋಗದಲ್ಲಿ ಗೋವಿಂದ ದಾಸ ಕಾಲೇಜಿನಲ್ಲಿ ನಡೆದ ಎರಡು ದಿನಗಳ ರಿಲೈಸನ್ನಿಂಗ್, ಡಿಜಿಟೈಸೇಷನ್ ಮತ್ತು ಅಪ್‍ಲೋಡಿಂಗ್ ಆನ್ ವಿಕಿ ಮೀಡಿಯ ಕಾಮನ್ಸ್ ಕಾರ್ಯಾಗಾರದಲ್ಲಿ ಮಾತನಾಡಿದರು.

ಈ ಕಾರ್ಯಗಾರದಲ್ಲಿ ಎಂ. ಪ್ರಭಾಕರ ಜೋಷಿ ಯವರ ಕೇದಗೆ ಪುಸ್ತಕವನ್ನು ಡಿಜಿಟೈಸೇಷನ್ ಮಾಡಿ ವಿಕಿ ಕಾಮನ್ಸ್‍ಗೇ ಅಪ್‍ಲೋಡ್ ಮಾಡಲಾಯಿತು. ಮುಂದಿನ ದಿನಗಳಲ್ಲಿ ಜೋಷಿಯವರ ಹದಿನೆಂಟು ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿ ವಿಕಿ ಕಾಮನ್ಸ್‍ಗೆ ಅಪ್‍ಲೋಡ್ ಮಾಡಲು ಡಾ. ಎಂ ಪ್ರಭಾಕರ ಜೋಷಿ ಅವರು ಅನುಮತಿ ನೀಡಿದರು.

ಪುಸ್ತಕಗಳ ಡಿಜಿಟೈಸೇಷನ್ ಮಾಡುವ ತರಬೇತಿಯನ್ನು ಸುಬೋದ್ ಕುಲಕರ್ಣಿ ಹಾಗೂ ಸಂಜೀವ್ ಬೊಂಡೆಯವರು ನೀಡಿದರು. ಸೆಂಟರ್ ಫಾರ್ ಇಂಟರ್‍ನೆಟ್ ಆ್ಯಂಡ್ ಸೊಸೈಟಿ ಬೆಂಗಳೂರಿನ ಸೀನಿಯರ್ ಪ್ರೋಗ್ರಾಮ್ ಆಪೀಸರ್ ಸುಬೋದ್ ಕುಲಕರ್ಣಿ ಮಾತನಾಡಿ ಗ್ರಂಥಗಳ ಡಿಜಿಟಲೀಕರಣದ ಮಹತ್ವವನ್ನು ತಿಳಿಸಿ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾ ದ ಪ್ರೋ. ಕೃಷ್ಣಮೂರ್ತಿ ಅವರು ವಹಿಸಿದ್ದರು. ಉಪ ಪ್ರಾಶುಂಪಾಲ ಪ್ರೋ. ರಮೇಶ್ ಭಟ್ ಎಸ್ ಜಿ, ನಿವೃತ್ತ ಗ್ರಂಥಪಾಲಕ ಬಾಲಕೃಷ್ಣ ಕೆ ಮುಖ್ಯ ಅತಿಥಿಗಳಾಗಿದ್ದರು.

ಕಾಲೇಜಿನ ಗ್ರಂಥಪಾಲಕಿ ಡಾ. ಸುಜಾತ ಬಿ ಸ್ವಾಗತಿಸಿದರು. ಕರಾವಳಿ ವಿಕಿ ಮೀಡಿಯ ಯೂಸರ್ ಗ್ರೂಪಿನ ಕೋಶಾಧಿಕಾರಿ ಡಾ. ಕಿಶೋರ್ ಕುಮಾರ್ ರೈ ಶೇಣಿ ಪ್ರಸ್ತಾಪಿಕ ಭಾಷಣ ಮಾಡಿದರು. ದೀಪ, ರಮೀತಾ ನಿರೂಪಿಸಿದರು. ಶರ್ಮಿತ ವಂದಿಸಿದರು.

ಕರಾವಳಿ ವಿಕಿ ಮೀಡಿಯ ಯೂಸರ್ ಗ್ರೂಪಿನ ಸದಸ್ಯೆ ಕವಿತಾ ಗಣೇಶ್ ಸದಸ್ಯ ಬೆನೆಟ್ ಅಮ್ಮನ್ನ ಬೆಸೆಂಟ್ ಸಂಧ್ಯಾ ಕಾಲೇಜಿನ ಗ್ರಂಥಪಾಲಕ ಡಾ.ವಾಸಪ್ಪ ಗೌಡ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

error: Content is protected !!
Share This