ಸಹೃದಯಿ ಕಲಾಪೋಷಕ, ದಕ್ಷ ಆಡಳಿತಗಾರ,ಕರ್ಣಾಟಕ ಬ್ಯಾಂಕ್‍ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ. ಪಿ. ಜಯರಾಮ ಭಟ್ (71 ವರ್ಷ) ಇಂದು ದೈವಾಧೀನರಾದರು. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ,ಕಲೆ, ಸಾಹಿತ್ಯ , ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಥೆಗಳಿಗೆ ನಿರಂತರವಾಗಿ ನೆರವು‌ ನೀಡುತ್ತಿದ್ದ ಸರಳ ಸಜ್ಜನಿಕೆಯ ಜಯರಾಮ ಭಟ್ಟರ ನಿಧನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ತುಂಬಿ ಬಾರದ ನಷ್ಟವಾಗಿದೆ. ಈ ಭಾಗದ ಯಕ್ಷಗಾನ ಸಂಘಟನೆಗಳಿಗೆ ಬ್ಯಾಂಕಿನ ಮೂಲಕ ಅವರು ನೀಡಿದ ಆರ್ಥಿಕ ಬೆಂಬಲ ಅವಿಸ್ಮರಣೀಯ. ಅವರಿಂದ ಉಪಕೃತರಾದವರಲ್ಲಿ ನಾವು, ನಮ್ಮ ಸಂಸ್ಥೆ ಸೇರಿದೆ.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಪೊಳಲಿ ಜಯರಾಮ ಭಟ್ಟರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ

error: Content is protected !!
Share This