ಯಕ್ಷಗಾನ ಕ್ಷೇತ್ರದಲ್ಲಿ ಪ್ರವೃತ್ತಿಯಾಗಿ ತೊಡಗಿಸಿಕೊಂಡ ಎಲ್ಲೂರು ಸೀಮೆಯ ಕುಂಜೂರು ನಿವಾಸಿ ಜಾನಪದ ಸಂಶೋಧಕ ವಿದ್ವಾಂಸ, ಸಂಸ್ಕೃತಿಯ ಹರಿಕಾರ, ಕುಂಜೂರು ಲಕ್ಷ್ಮೀನಾರಾಯಣ ಕುಂಡಂತಾಯರಿಗೆ (ಕೆ. ಎ. ಎಲ್‌. ಕುಂಡಂತಾಯ) ಪಡ್ರೆ ಚಂದು, ಹಾಗೂ ಎರ್ಮಾಳು ವಾಸುದೇವರಾಯರು ಗುರುಗಳು. ಸಮರ್ಥ ಯಕ್ಷಗಾನ ವೇಷಧಾರಿಯಾಗುವುದರ ಜೊತೆಗೆ ತಾಳಮದ್ದಳೆ ಅರ್ಥಧಾರಿಯೂ ಹೌದು. ಯಕ್ಷಗಾನ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ, ಕಮ್ಮಟಗಳ ಅವಲೋಕನ, ತಾಳಮದ್ದಳೆ ಸಪ್ತಾಹಗಳ ಅವಲೋಕನ, ವಿಮರ್ಶಾ ಲೇಖನಗಳಲ್ಲಿಯೂ ಇವರ ಕೊಡುಗೆ ಅಪಾರ. ಇವರ ಸಾಧನೆಯನ್ನು ಪರಿಗಣಿಸಿ ಈ ಸಲದ ಪ್ರತಿಷ್ಠೆಯ ‘ಅಭಿನವ ಪಾರ್ತಿಸುಬ್ಬ’ ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಒಲಿದು ಅರಸಿ ಬಂದದ್ದು ಇವರ ಕೀರ್ತಿ ಮುಕುಟಕ್ಕೆ ಇನ್ನೊಂದು ಗರಿಯು ಸೇರ್ಪಡೆಗೊಂಡ. ಹಾಗಾಯ್ತು. ಅ. 7ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಮೇಳದ ಕಲಾವಿದರಿಂದ ಜಾಂಬವತಿ ಕಲ್ಯಾಣ ಪ್ರಸಂಗದ ಪ್ರದರ್ಶನ ನೆರವೇರಲಿದೆ.

ಕುಂಡಂತಾಯರದ್ದು ಬಹುಮುಖ ಪ್ರತಿಭೆ. ನಾಗಾರಾಧನೆ, ಭೂತಾರಾದನೆ, ಯಕ್ಷಗಾನ ಕ್ಷೇತ್ರದಲ್ಲಿ ಅಗಾದ ಜ್ಞಾನವನ್ನು ಹೊಂದಿದವರು. ಎಲ್ಲೂರು ದೇವಳದಲ್ಲಿ ದೀವಟಿಗೆ ಬೆಳಕಿನ ಯಕ್ಷಗಾನ ಬಯಲಾಟವನ್ನು ಡಾ| ರಾಘವ ನಂಬಿಯಾರರ ನಿರ್ದೇಶನದಲ್ಲಿ ಸಂಯೋಜಿದ್ದು ಇವರ ಹಿರಿಮೆ.  ಕಲಿತದ್ದು ವಿಜ್ಞಾನ ಪದವಿಯಾದರೂ ಸಾಹಿತ್ಯಪರ ಒಲವಿದ್ದು ಇಷ್ಟಪಟ್ಟು ಓದಿದ್ದು ಕನ್ನಡ ಸ್ನಾತಕೋತ್ತರ ಪದವಿ. ಉದಯವಾಣಿ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ದೀರ್ಫಕಾಲ ಸಲ್ಲಿಸಿದ ಸೇವೆಯಲ್ಲಿ ಮೂಡಿ ಬಂದ ಮೌಲ್ಯಯುತ, ಸಂಶೋಧನಾತ್ಮಕ, ಅನನ್ಯ ಲೇಖನಗಳು ಸಾವಿರಾರು. ನಾಗಾರಾಧನೆ ಬಗ್ಗೆ ಇವರು ವಿಸ್ತೃತವಾದ ಕ್ಷೇತ್ರ ಕಾರ್ಯ ಅಧ್ಯಯನವನ್ನು ಮಾಡಿ ನೂರಾರು ಲೇಖನಗಳನ್ನು ಬರೆದು ಉಪನ್ಯಾಸ ನೀಡಿದ, ವೈದಿಕ ಪೂರ್ವದ ನಾಗಾರಾಧನೆ ಬಗ್ಗೆ ಸಂಶೋಧನೆ ಮಾಡಿ ಉಪನ್ಯಾಸ, ಲೇಖನ, ದಾಖಲೀಕರಣ ಮಾಡಿದ್ದಾರೆ.

ತುಳುನಾಡಿನ ಮಣ್ಣಿನ ವಿಶಿಷ್ಟ ಆರಾಧನೆಯಾದ, ಭೂತಾರಾಧನೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರು ಅವುಗಳ ಕುರಿತು ಸಾಕಷ್ಟು ಅಧ್ಯಯನ  ನಡೆಸಿ ಲೇಖನ, ಪುಸ್ತಕ, ಉಪನ್ಯಾಸ, ನಡೆಸಿ ಸಂಗ್ರಹ ಯೋಗ್ಯವಾದ ಕೃತಿಗಳನ್ನು ರಚಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ದೇವಾಲಯಗಳ ಕುರಿತು ಐತಿಹಾಸಿಕ್ಕ ಜಾನಪದ, ಪೌರಾಣಿಕ, ಹಿನ್ನೆಲೆಯನ್ನು ಅಧ್ಯಯನ ಮಾಡಿ ಅನೇಕ ದೇವಾಲಯಗಳ ಕುರಿತು ಕೃ ತಿಗಳನ್ನು ರಚಿಸಿದ್ದು. ಪುರಾತನ ದೇವಾಲಯಗಳು ಜೀರ್ಣೋದ್ದಾರ”

ಹೊಂದುವ ಸಮಯದಲ್ಲಿ ರಚಿಸಲ್ಪಡುವ ಕ್ಷೇತ್ರ ಪರಿಚಯ ಲೇಖನಗಳಿಗೆ ಇವರದೇ ಸಂಪಾದಕೀಯತ್ವ ವಿರಾಡ್‌ – ದರ್ಶನ, ದುರ್ಗಾ ದರ್ಶನ ಶಿಲೆಗಿರಿ ಸುಬ್ಬನ ಪ್ರಸಂಗ, ಧರ್ಮನೇಮ, ಅಣಿ ಅರದಲ, ಸಿರಿ ಸಿಂಗಾರ, ಸಿರಿನಡೆ ಫೇರೂಯ ಆಲಡೆ, ಮಾರ್ನೆಮಿ, ದೇವಾಲಯ ಪೂರ್ವೋತ್ತರ, ನಂಬಿಕೆ ನಡವಳಿಕೆ, ಪರ್ವಕಾಲ ಇವರ ಕೆಲವು ಪ್ರಮುಖ ಕೃತಿಗಳು.

  • ಸುರೇಂದ್ರ ಪಣಿಯೂರ್‌
error: Content is protected !!
Share This