“ಶ್ರೀ ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಎಂಬುದು ಬರಿಯ ಪ್ರದರ್ಶನ ಸಂಸ್ಥೆಯಲ್ಲ. ಅದು ಕಲಾ ಸೌಂದರ್ಯ, ಸೃಜನಶೀಲತೆ, ಶಿಕ್ಷಣ ಮತ್ತು ವಿಸ್ತರಣೆಗಳ ಒಂದು ಚಳವಳಿಯ ಸಂಕೇತ. ಮಂಡಳಿಯ ಶಿವರಾಮ ಹೆಗಡೆ, ಶಂಭು ಹೆಗಡೆ ಅವರ ಭವ್ಯ ಪರಂಪರೆಯನ್ನು ಶ್ರೀ ಶಿವಾನಂದ ಹೆಗಡೆ ಅವರು ಮುಂದುವರಿಸುತ್ತಿರುವುದು ಶ್ಲಾಘನೀಯ” ಎಂದು ಹಿರಿಯ ಕಲಾವಿದ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಅವರು ಹೇಳಿದರು.

ಅವರು ಶ್ರೀ ನಂದನೇಶ್ವರ ದೇವಳದ ಜಾತ್ರಾ ಮಹೋತ್ಸವದ ಸಂದರ್ಭ ಹಿರಿಯ ನಟ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಕಲಾಭಿಮಾನಿ ಬಳಗ ಪಣಂಬೂರು ಇದರ ಪರವಾಗಿ ಸಮ್ಮಾನಿಸಿದ ಸಂದರ್ಭ ಕೆರೆಮನೆ ಇಡಗುಂಜಿ ಮೇಳದ ಸಾಧನೆಗಳ ಕುರಿತು ಮಾತನಾಡಿದರು.

ಸಮ್ಮಾನ ಸ್ವೀಕರಿಸಿದ ಶಿವಾನಂದ ಹೆಗಡೆ ಅವರು, ಮೇಳದ ಧ್ಯೇಯ, ಧೋರಣೆ ವಿವರಿಸಿ, ಕೃತಜ್ಞತೆ ಸಲ್ಲಿಸಿದರು.

ಆಡಳಿತ ಮಂಡಳಿಯ ಶ್ರೀ ಅನಂತ ಐತಾಳ ಅಧ್ಯಕ್ಷತೆ ವಹಿಸಿದ್ದರು. ಕುಡುಪು ನರಸಿಂಹ ತಂತ್ರಿಗಳು ಶುಭ ಹಾರೈಸಿದರು. ಸಂಯೋಜಕರಾದ ಪಿ. ವಾಸುದೇವ ಐತಾಳ, ಮೀನಾಕ್ಷಿ ಐತಾಳ, ಅತಿಥಿಗಳಾದ ಪಿ. ಶಶಿಧರ ಐತಾಳ ಮೊದಲಾದವರು ಉಪಸ್ಥಿತರಿದ್ದರು. ಮಧುಕರ ಭಾಗವತರು ಮಾನಪತ್ರ ವಾಚಿಸಿದರು. ಪಿ. ಸಂತೋಷ ಐತಾಳ ನಿರ್ವಹಿಸಿದರು. ಶ್ರೀ ಇಡಗುಂಜಿ ಮೇಳದವರಿಂದ “ವಾಲಿಮೋಕ್ಷ” ಯಕ್ಷಗಾನ ಪ್ರದರ್ಶನ ಜರಗಿತು.

error: Content is protected !!
Share This