ಯಕ್ಷಗಾನ ಕಲಾವಿದ, ಸಂಘಟಕರಾಗಿ ಜನಪ್ರಿಯತೆ ಗಳಿಸಿದ್ದ ದಿ.ಬಾಬು ಕುಡ್ತಡ್ಕ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದ್ದು , ಚೊಚ್ಚಲ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಕಲಾವಿದ, ಸಂ ಘಟಕ ಕೆ.ಹೆಚ್.ದಾಸಪ್ಪ ರೈ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರದ ವತಿಯಿಂದ ಬಾಬು ಕುಡ್ತಡ್ಕ ಪ್ರಶಸ್ತಿಯನ್ನು ಅವರ ಸ್ಮರಣಾರ್ಥ ನೀಡಲಾಗುತ್ತಿದೆ.
ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ಗೌರವ ಪತ್ರ ಒಳಗೊಂಡಿದೆ.

ಅಕ್ಟೋ ಬರ್ 2ರಂದು ಮಧ್ಯಾಹ್ನ 2.30ರಿಂದ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಸೌಧದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ ಜರುಗಲಿದೆ.

ಜಿಲ್ಲೆಯ ಹೆಸರಾಂತ ಕಲಾವಿದರಿಂದ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ಜರುಗಲಿದ್ದು , ಹಿಮ್ಮೇಳದಲ್ಲಿ ಬಲಿಪ ಶಿವಶಂಕರ ಭಟ್,
ಶಾಲಿನಿ ಹೆಬ್ಬಾರ್, ಅಕ್ಷಯ್, ವರು ಣ್ ಇರುತ್ತಾರೆ. ಮುಮ್ಮೇಳದಲ್ಲಿ ಶಂಭು ಶರ್ಮ ವಿಟ್ಲ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಜಬ್ಬಾರ್
ಸಮೊ ಸಂಪಾಜೆ, ಪ್ರಜೀಪ್ ಸಾಮಗ ಭಾಗವಹಿಸಲಿದ್ದಾರೆ ಎಂದು ಸ್ವಸ್ತಿಕ್ ಕಲಾಕೇಂದ್ರದ ಅಧ್ಯಕ್ಷ ಕೆ.ಸಿ.ಹರಿಶ್ಚಂದ್ರ ರಾವ್ ಅವರು
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಾಬು ಕುಡ್ತಡ್ಕ ಅವರು 40ಕ್ಕೂ ಹೆಚ್ಚು ವರ್ಷಗಳ ಕಾಲ ವಿವಿಧ ಯಕ್ಷಗಾನ ಮೇಳಗಳಲ್ಲಿ ಪಾತ್ರಧಾರಿಯಾಗಿ ಮೆರೆದವರು . 10
ವರ್ಷಗಳ ಕಾಲ ತಮ್ಮದೇ ಆದ ಶ್ರೀ ಗುರು ರಾಘವೇಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ,
ಕಲಾವಿದರನ್ನು ಸೇರಿಸಿಕೊಂಡು ಮೇಳವನ್ನು ಮುನ್ನಡೆಸಿದ್ದಾರೆ.

ಹದಿನೇ ಳು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿರು ವ ಬಾಬು ಕುಡ್ತಡ್ಕ ಅವರು , ಕೂಡ್ಲು , ಕುಂಬಳೆ, ಸುರತ್ಕಲ್, ಸುಂಕದಕಟ್ಟೆ,
ಕೊಲ್ಲೂ ರು, ಕಾಸರಗೋಡು, ಇರಾ, ಕರ್ನಾಟಕ, ಕದ್ರಿ ಮೇಳಗಳಲ್ಲಿ ಕಲಾ ಸೇವೆ ಮಾಡಿದ್ದಾರೆ. ಸುರತ್ಕಲ್ ಮೇಳವೊಂದರಲ್ಲೇ 23
ವರ್ಷ ತಿರುಗಾಟ ಮಾಡಿದವರು. ಕಾವು ಕಣ್ಣ ಅವರಿಂದ ಯಕ್ಷಗಾನಾಭ್ಯಾಸ ಮಾಡಿರುವ ಇವರ ಕಂಸ, ಮಾಗಧ, ಜಲಂಧರ,
ರಾವಣ, ದಾರಿಕಾಸುರ, ಹಿರಣ್ಯಾಕ್ಷ, ಹಿರಣ್ಯಕಶ್ಯಪು ಪಾತ್ರಗಳು ಜನಪ್ರಿಯತೆ ಗಳಿಸಿವೆ.

ಪ್ರಶಸ್ತಿ ಪುರಸ್ಕೃತ ಕೆ.ಹೆಚ್.ದಾಸಪ್ಪ ರೈ ಅವರು ಸುದೀರ್ಘಕಾಲ ಯಕ್ಷಗಾನ ವೇಷಧಾರಿಯಾಗಿ, ಸಂಘಟಕರಾಗಿ ಪ್ರಸಿದ್ಧಿ
ಪಡೆದವರು. ಕುಂಬ್ಳೆ ಮೇಳ ಸ್ಥಾಪಿಸಿದ್ದ ಅವರು ವಿಶೇಷವಾಗಿ ತುಳು ಯಕ್ಷಗಾನದ ಕೋಟಿ ಚೆನ್ನಯ, ದೇವು ಪೂಂಜ ಪ್ರತಾಪ
ಮುಂತಾದವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಕೋಟಿ ಚೆನ್ನಯ ಪ್ರಸಂಗದ ಕೋಟಿ ಪಾತ್ರವಂತೂ ಅಪಾರ ಜನಮನ್ನಣೆ
ಗಳಿಸಿತ್ತು .

error: Content is protected !!
Share This