ಸಾಮಾಗ್ರಿಗಳು

ಕ್ಯಾರೆಟ್ – ಎರಡು, ನಿಂಬೆ ಹುಳಿ – ಒಂದು, ಸಕ್ಕರೆ – ಎರಡು ಚಮಚ, ಏಲಕ್ಕಿ – ಕೆಲವು ಎಸಳುಗಳು, ನೀರು

ಮಾಡುವ ಕ್ರಮ

ಕ್ಯಾರೆಟ್‌ಗಳನ್ನು ತೊಳೆದು ತುರಿಯಬೇಕು. ತುರಿದ ಕ್ಯಾರೆಟ್ಟನ್ನು ನೀರು ಹಾಕಿ ಚೆನ್ನಾಗಿ ರುಬ್ಬಿ, ಸೋಸಬೇಕು. ಆಮೇಲೆ ಅದಕ್ಕೆ ಸಕ್ಕರೆ, ನಿಂಬೆ ಹಣ್ಣು ಹಾಗೂ ಕುಟ್ಟಿದ ಏಲಕ್ಕಿಯನ್ನು ಹಾಕಿ ಕಲಸಿ. ಕಾರೆಟ್ ಶರಬತ್ತು ತಯಾರು! ಮಾಡಲು ಸುಲಭ, ಕುಡಿಯಲು ಆರೋಗ್ಯಕರ. (ಕಾರೆಟ್‌ನಲ್ಲೇ ಸ್ವಲ್ಪ ಸಿಹಿ ಅಂಶ ಇರುವುದರಿಂದ ಸಕ್ಕರೆ ಹಾಕದೆ ಕೂಡ ಇದನ್ನು ಮಾಡಬಹುದು. ಸಕ್ಕರೆ ಕಡಿಮೆ ಮಾಡಿದಷ್ಟೂ ಆರೋಗ್ಯಕ್ಕೆ ಉತ್ತಮ.)

error: Content is protected !!
Share This