ಆರಂಭ: 1993

ಡಾ| ಬಿ. ಬಿ. ಶೆಟ್ಟಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಸಮಾಜ ಸೇವಕರು, ಕಲಾಪೋಷಕರು, ಸಾಂಸ್ಕೃತಿಕ ನೇತಾರರಾಗಿದ್ದವರು. ಅವರದು ಸ್ಪಷ್ಟ ಚಿಂತನೆ, ನೇರ ನಡೆನುಡಿಯ ಧೀಮಂತ ವ್ಯಕ್ತಿತ್ವ. ನಿಷ್ಠುರವಾದಿಗಳೂ, ಪ್ರಾಮಾಣಿಕರೂ, ನ್ಯಾಯ ಪಕ್ಷಪಾತಿಗಳೂ, ಆಂತರ್ಯದಲ್ಲಿ ಶ್ರೇಷ್ಠ ಮಾನವತಾವಾದಿಗಳೂ ಆಗಿದ್ದ ಅವರು ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡವರು.

ಕಲಾವಿದರ ಬಗ್ಗೆ ಅದರಲ್ಲೂ ಯಕ್ಷಗಾನ ಕಲಾವಿದರ ಬಗ್ಗೆ ಅವರಿಗೆ ವಿಶೇಷ ಪ್ರೀತಿ. ಬಡಕಲಾವಿದರ ಬಗ್ಗೆ ಕರುಣೆ. ಅವರೆಲ್ಲರ ಯೋಗಕ್ಷೇಮಕ್ಕೆ ತನ್ನದೆಲ್ಲವನ್ನೂ ಕೊಡುವಷ್ಟು ಧಾರಾಳಿ, ನಾಟಕ ಕಲಾವಿದರಿಗೆ ವಿಶೇಷವಾಗಿ ಯಕ್ಷಗಾನ ಕಲಾದರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ, ಶುಶೂಷೆ ನೀಡಿ ಕಲಾವಿದರ ಪಾಲಿಗೆ ಸಾಕ್ಷಾತ್ ಪರಮಾತ್ಮನಂತೆ ಇದ್ದವರು.

ಯಕ್ಷಗಾನದ ಬಗ್ಗೆ ಅವರಿಗಿದ್ದ ಆಸಕ್ತಿಯ ಫಲವಾಗಿ ಯಕ್ಷಗಾನ ಕಲಾರಂಗ ಸ್ಥಾಪನೆಗೊಂಡಿತು. ಕಲಾರಂಗದ ಸ್ಥಾಪಕ ಅಧ್ಯಕ್ಷರಾಗಿ, ತನ್ನ ಜೀವಿತದ ಕೊನೆಯವರೆಗೆ ಅದನ್ನು ಮುನ್ನಡೆಸಿ, ಕಲಾರಂಗ ಸಂಸ್ಥೆಗೆ ಭದ್ರ ಅಡಿಪಾಯ ಹಾಕಿದ ಡಾ| ಬಿ. ಬಿ. ಶೆಟ್ಟರು ಯಕ್ಷಗಾನ ಕಲೆ ಕಲಾವಿದರ ಏಳಿಗೆಗಾಗಿ ನಿರಂತರ ಶ್ರಮಿಸಿದವರು.

ದಶಕಗಳ ಕಾಲ ಅವರು ಅಧ್ಯಕ್ಷರಾಗಿದ್ದ ಎ.ಜೆ. ಯು. ಕ್ಲಬ್ ಆರ್ಥಿಕ ಸಹಕಾರದೊಂದಿಗೆ ಯಕ್ಷಗಾನ ಕಲಾರಂಗ ಡಾ. ಶೆಟ್ಟರ ಹೆಸರಿನಲ್ಲಿ ಪ್ರತೀವರ್ಷ ಒಬ್ಬ ಶ್ರೇಷ್ಠ ಕಲಾವಿದನನ್ನು ಗೌರವಿಸುತ್ತಿದೆ.

ಈವರೆಗಿನ ಪ್ರಶಸ್ತಿ ಪುರಸ್ಕೃತರು
1. ಸಕ್ಕಟ್ಟು ಲಕ್ಷ್ಮೀನಾರಾಯಣ
2. ಹಾರಾಡಿ ನಾರಾಯಣ ಗಾಣಿಗ.
3. ಕಾಂತಪ್ಪ ಮಾಸ್ತರ
4. ಶಿರಿಮಠ ಪಂಜು ನಾಯ್ಕ
5. ವಂಡಾರು ಬಸವ ನಾಯರಿ
6. ಕುಂಜಾಲು ರಾಮಕೃಷ್ಣ
7. ಚಂದ್ರಗಿರಿ ಅಂಬು
8. ಕೋಳೂರು ರಾಮಚಂದ್ರ ರಾವ್
9. ಬಣ್ಣದ ಮಾಹಾಲಿಂಗ
10. ಕೇದಗಡಿ ಗುಡ್ಡಪ್ಪ ಗೌಡ
11. ಮಾರ್ಗೋಳಿ ಗೋವಿಂದ ಶೇರಿಗಾರ
12. ಕುಂಬಳೆ ಸುಂದರ ರಾವ್
13. ಪಾತಾಳ ವೆಂಕಟರಮಣ ಭಟ್
14. ಪುರುಷೋತ್ತಮ ಭಟ್ ಕಟೀಲು
15. ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್
16. ಕೆ. ಗೋವಿಂದ ಭಟ್
17. ಅರುವ ಕೊರಗಪ್ಪ ಶೆಟ್ಟಿ
18. ಸಂಪಾಜೆ ಶೀನಪ್ಪ ರೈ
19. ಪುತ್ತೂರು ಶ್ರೀಧರ ಭಂಡಾರಿ
20. ಬೋಳಾರ ಸುಬ್ಬಯ್ಯ ಶೆಟ್ಟಿ
21. ಕೆ. ಹೆಚ್. ದಾಸಪ್ಪ ರೈ
22. ಹಳ್ಳಾಡಿ ಜಯರಾಮ ಶೆಟ್ಟಿ
23. ಶಿವರಾಮ ಶೆಟ್ಟಿ ಹೊಸಕೊಪ್ಪ
24. ಗೇರುಕಟ್ಟೆ ಗಂಗಯ್ಯ ಶೆಟ್ಟಿ

-ಕಲಾಂತರಂಗ

error: Content is protected !!
Share This