ತೆಂಕುತಿಟ್ಟಿನ ಹಿರಿಯ ಭಾಗವತರಾದ ತೆಂಕಬೈಲು ತಿರುಮಲೇಶ ಶಾಸ್ತ್ರಿ(77ವರ್ಷ) ಇಂದು ನಿಧನರಾದರು. ಸುಮಾರು ಐದು ದಶಕಗಳ ಕಾಲ ವೃತ್ತಿ ಹಾಗೂ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ತಮ್ಮದೇ ವಿಶಿಷ್ಟ ಶೈಲಿಯಮೂಲಕ ಪ್ರಸಿದ್ಧರಾಗಿದ್ದರು.

ಪತ್ನಿ, ಈರ್ವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ಪುತ್ರ ಮುರಲಿ ಕೃಷ್ಣ ಶಾಸ್ತ್ರೀ ಪ್ರಸಿದ್ಧ ಭಾಗವತರಾಗಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು ಯಕ್ಷಗಾನ ಕಲಾರಂಗ 2011ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು.

error: Content is protected !!
Share This