ಫೆ. 12, 13 ಹಾಗೂ 14ರಂದು ಮೂರು ದಿನಗಳ ಕಾಲ ಸರಕಾರದ ನಿಯಮಾನುಸಾರ ಕೋವಿಡ್-19 ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಜರಗಲಿರುವ ದಕ್ಷಿಣ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥದಾರಿ ಡಾ. ಎಂ. ಪ್ರಭಾಕರ ಜೋಶಿ ಆಯ್ಕೆಗೊಂಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ತಿಳಿಸಿದ್ದಾರೆ.

ಅಗ್ರಮಾನ್ಯ ಅರ್ಥಧಾರಿ ಪ್ರಭಾವೀ ಭಾಷಣಕಾರ, ವಿಮರ್ಶಕ, ಚಿಂತಕ, ಕವಿ, ಬಹುಭಾಷಾ ವಿಶಾರದ, ಸಮರ್ಥ ಅಧ್ಯಾಪಕ, ಬೆಸೆಂಟ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಅಂಕಣಕಾರ, ಸಂಘಟಕ, ಖ್ಯಾತ ಸಂಶೋಧಕ, ಆಪ್ತ ಸಲಹೆಗಾರರಾಗಿ ಜೋಶಿಯವರು ಬಹುಮಾನ್ಯರು. ನೂರಾರು ಪ್ರಶಸ್ತಿ ಪುರಸ್ಕೃತರಾದ ಜೋಶಿಯವರು ವಿದ್ವತ್ ವಲಯದಲ್ಲಿ ಚಿರಪರಿಚಿತರು.

Share This