ಜನಮಾಧ್ಯಮ ಪತ್ರಿಕೆಯ ಸಂಪಾದಕೀಯ

ಕರ್ಕಿ ನಾರಾಯಣ ಹಾಸ್ಯಗಾರರ ನಿಧನದಿಂದ ಬಡಗುತಿಟ್ಟಿನ ಅಪೂರ್ವ ಪರಂಪರೆಯ, ಬಹುಶಃ ಒಂದು ಯುಗವೇ ಅಂತ್ಯ ವಾಯಿತೆನ್ನಬಹುದು. ಯಕ್ಷಗಾನ ಕೇವಲ ರಂಗಕಲೆಯಲ್ಲ. ಅದೊಂದು ಸಾಂಸ್ಕೃತಿಕ ಸಂಪ್ರದಾಯ ಕೂಡಾ ಆಗಿದೆ. ಅಲ್ಲದೇ ಆಗಮ ಶಾಸ್ತ್ರೀಯ ಕಲೆ. ಇದನ್ನು ಕರ್ಕಿ ಮೇಳದ ಕಲಾವಿದರು ಆಚರಿಸಿಕೊಂಡು ಬಂದಿದ್ದರು ಎಂದು ಹೇಳಬಹುದು. ಅಂಥ ಕಲಾಪರಂಪರೆಯ ವಾರಸುದಾರರಲ್ವೊಬ್ಬರಾಗಿದ್ದ ನಾರಾಯಣ ಹಾಸ್ಯಗಾರರ ನಿಧನದೊಂದಿಗೆ ಆ ಯುಗಾಂತ್ಯವೂ ಆಯಿತು.

ಯಕ್ಷಗಾನ ಪ್ರಸಂಗಗಳಿಗೆ ಪೌರಾಣಿಕ ಚೌಕಟ್ಟಿದೆ. ಆದರೆ ಅವುಗಳನ್ನು ಪ್ರದರ್ಶಿಸುವಾಗ ಕಾಲ, ದೇಶವನ್ನು ಮೀರಿ ಬೆಳೆಯುತ್ತಾ, ಕಲೆಯನ್ನು ಬೆಳೆಸುತ್ತಾ ಸಾಗಿಬಂದ ಅನೇಕ – ಮೇಳಗಳಿವೆ. ಅವುಗಳಲ್ಲಿ ಕರ್ಕಿ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮಂಡಳಿಯದು ಮೊದಲ ಮೈಲಿಗಲ್ಲು. ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಹೆಗಡೆಯವರು ಕರ್ಕಿ ಮೇಳದ ವಿಶಿಷ್ಟ ಬಣ್ಣಗಾರಿಕೆಯ ಮೇಲೆ ಪಿಎಚ್‌ಡಿ ಮಾಡಿದವರಲ್ಲದೇ ಆ ಪರಂಪರೆಯ ಪ್ರಸಂಗ ಪ್ರಸ್ತುತಿ ಮಾಡಿದವರು. ಅವರ ಪ್ರಕಾರ ಕರ್ಕಿ ಮೇಳದ ಹಿರಿಯ ಕಲಾವಿದ ನಾರಾಯಣ ಹಾಸ್ಯಗಾರರು ಪಾರಂಪರಿಕ ನೃತ್ಯ ಹಾಗೂ ವೇಷಗಾರಿಕೆಯ ಅಧಿಕೃತ ಮತ್ತು ಜೀವಂತ ದಾಖಲೆಯಾಗಿದ್ದರು. ಈ ಮಾತಿಗೆ ಪುಷ್ಪಿಯೆನ್ನುವಂತೆ ಶಬರನ ತೆರೆ ಕುಣಿತ, ಕೃಷ್ಣ ನ ಒಡ್ಡೋಲಗ, ವಿಶಿಷ್ಟಲಾ ಲಾಲಿನೃತ್ಯಗಳನ್ನು ಹೆಸರಿಸಿದ್ದಾರೆ.ಯಕ್ಷಗಾನದಲ್ಲಿ ಸಭಾಹಿತ ಮಟ್ಟು ಎಂಬುದು ಬಡಗಿನ ಮತ್ತು ಕರ್ಕಿಪರಂಪರೆ ಮೂಲಕ ಚಾಲ್ತಿಯಲ್ಲಿದ್ದ ಪ್ರದರ್ಶನ ಪದ್ಧತಿ. ಈ ಶಾಸ್ತ್ರೀಯತೆಯನ್ನು ಮುಂದೆ ಕೆರೆಮನೆ ಮೇಳ ಹಾಗೂ ಉತ್ತರಕನ್ನಡದ ಅನೇಕ ಮೇಳಗಳು ಅನುಸರಿಸಿದವು. ಆದರೆ ಕಾಲಕ್ಕನುಗುಣವಾಗಿ, ಸಭಾಹಿತ ಮಾರ್ಗವನ್ನು ಬಿಟ್ಟು ಬೇರೆ ಬೇರೆ ಪ್ರಸ್ತುತಿಯಲ್ಲಿ ಸಾಗಿದವು. ತೆಂಕಿನ ಯಕ್ಷಗಾನ ಪ್ರದರ್ಶನ ಶೈಲಿಯೇ ಒಂದು ಸಾಂಸ್ಕೃತಿಕ ಕಲಾ ವೈಭವವೋ, ಹಾಗೇ ಬಡಗು, ಬಡಾಬಡಗು ಶೈಲಿಗಳೂ ಮೆರೆದಿವೆ. ನೂರಾರು ವರ್ಷಗಳಲ್ಲಿ ಇಂಥ ಕಲೆಗಳು ಖಂಡಿತವಾಗಿಯೂ ಪ್ರಾದೇಶಿಕ. ಕಾಲಮಾನಗಳ ಪ್ರಭಾವದಿಂದ ಬದಲಾಗುತ್ತ ಪ್ರೇಕ್ಷಕರ ಆಸಕ್ತಿಯನ್ನುಳಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಯಕ್ಷಗಾನವೂ ಹೊರತಲ್ಲ. ಯಕ್ಷಗಾನದ ಪ್ರಾಚೀನ ಶೈಲಿ ಯಾವುದೆಂದು ಕೇಳಿದರೆ ಅದಕ್ಕೆ ಕರ್ಕಿ ಮೇಳವೊಂದೇ ಜೀವಂತ ಸಾಕ್ಷಿಯಾಗಿತ್ತು. ಈ ಮೇಳದ ಸ್ಥಾಪಕ ಗಣೇಶ ಹೆಗಡೆಯವರ ಕಾಲಕ್ಕೆ ಯಕ್ಷಗಾನದ ಪ್ರಸ್ತುತಿ ಹೇಗಿತ್ತು? ಗೊತ್ತಿಲ್ಲ. ಆದರೆ ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿದ್ದ ಈ ಪರಂಪರೆಯ ವಾರಸುದಾರರಾಗಿದ್ದ ದೊಡ್ಡ ಪರಮೈ ಹಾಸ್ಯಗಾರರು ಮತ್ತು ಅವರ ನಾಲ್ವರು ಸುಪುತ್ರರು ಮುನ್ನಡೆಸಿಕೊಂಡು ಬಂದ ಪದ್ಧತಿಯೇ ಶಾಸ್ತ್ರೀಯ ಹಾಗೂ ಆರಾಧನಾ ರೂಪದಲ್ಲಿ ರಂಗದಲ್ಲಿದೆ. ಅದನ್ನು ವೀಕ್ಷಿಸಿ ಹಾಸ್ಯಗಾರರ ಆಟ ನೋಡಿದ ಮೇಲೆ ಬೇರೆಯವರ ಆಟ ನೋಡದ ಎಷ್ಟೋ ಅಭಿಮಾನಿ ರಸಿಕರು ಈ ಜಿಲ್ಲೆಯಲ್ಲಿದ್ದರು. ಅಂಥ ಒಂದು ಸಂಪದ್ಭರಿತ ರಂಗವೆ ವೈಭವದ ಕಸ್ತೂರಿ ತಿಲಕವಾಗಿದ್ದ ನಾರಾಯಣ ಹಾಸ್ಯಗಾರರು ತೋರಿಸಿದ, ನೆನಪುಳಿದ ಕಲಾವಿದರು ಇಂದು ನಮ್ಮೊಡನೆ ಇಲ್ಲ.

ನಾರಾಯಣ ಯ ಕಂಸ, ಮಾಗಧ, ಕೌರವ ಮುಂತಾದ ಪ್ರತಿನಾಯಕನ ಪಾತ್ರ ಮಾಡಿದ್ದೀರಲಿಕ್ಕಿಲ್ಲವೆಂದೇ ಹೇಳಬೇಕು. ಅನಿವಾರ್ಯ ಸಂದರ್ಭದಲ್ಲಿ ಕೀಚಕ. ಭೀಮ, ವಾಲಿಯಂತಹ ವೇಷ ಮಾಡಿದ್ದಾರೆಂದು ಹೇಳುತ್ತಾರೆ ನೋಡಿದ ರಸಿಕರು; ಆದರೆ ನಾರಾಯಣ ಹಾಸ್ಯಗಾರರು ಕೃಷ್ಣ ಬಬ್ರುವಾಹನ, ಅಭಿಮನ್ಯು, ಅರ್ಜುನ, ಸುಧನ್ವ, ಲಕ್ಷ್ಮಣ, ಶಲ್ಯ, ರಾಮ, ಶಬರ ಪಾತ್ರಗಳನ್ನು ಲಾಲಿತ್ಯಪೂರ್ಣವಾಗಿ ರಂಜಿಸಿದವರು. ಅವರ ಕೃಷ್ಣನ ವೇಷ ಅವರು ಕಳಚಿದ ವೇಷದ ಜೊತೆಗೇ ಮರೆಯಾಯಿತು. ಲಾಲಿನೃತ್ಯ ಯಕ್ಷಗಾನ ಕಲೆಗೆ ಅವರ ಕೊಡುಗೆ. ಭಾವಕ್ಕೆ ತಕ್ಕುದಾದ ಹಸ್ತಾಭಿನಯ, ಪಾತ್ರಗಳಲ್ಲಿ ತನ್ಮಯತೆ, ನಾಣಿ (ನಾರಾಯಣ ಹಾಸ್ಯಗಾರ) ಯವರ ವ್ಯಕ್ತಿತ್ವ ಯಕ್ಷಗಾನದ ಎಲ್ಲ ಆಯಾಮಗಳಲ್ಲೂ ಪರಿಶ್ರಮವುಳ್ಳವರಾಗಿದ್ದರು. ವೇಷ ಬಿಚ್ಚಿಟ್ಟ ಮೇಲಿನ ಅವರ ಜೀವನ ಕಷ್ಟದ ದಿನಗಳಾಗಿದ್ದವು. ಮೇಳದಲ್ಲಿನ ಮಡಿವಂತಿಕೆ ಮುಂದೆ ಗೀಳಾಗಿ ಅದರಿಂದ ಹೊರಬರದಾದರು. ನಾರಾಯಣ ಹಾಸ್ಯಗಾರರು ಶಿರಸಿಯ ಯಕ್ಷ ಸಂಭ್ರಮ ಟ್ರಸ್ಟ್‌ ಸಹಯೋಗದೊಂದಿಗೆ ಶಿರಸಿಯಲ್ಲಿ ಶೇಣಿ ಗೋಪಾಲಕೃಷ್ಣ ಪ್ರಶಸ್ತಿ. ನಟರಾಜ ನೃತ್ಯ ಶಾಲೆ ವಾರ್ಷಿಕವಾಗಿ ಹಿರಿಯ ಕಲಾವಿದರಿಗೆ ನೀಡುವ ಗೌರವ , ಪುರಸ್ಥಾರಗಳಲ್ಲದೆ ಹಲವು ಪ್ರಶಸ್ತಿ ಪುರಸ್ಥಾರಗಳಿಂದ ಗೌರವಿಸಲ್ಪಟ್ಟವರು. ಕುಮಟಾ ಡಾ. ಗೋಪಾಲಕ ಷ್ಣ ಹೆಗಡೆಯವರು ತಮ್ಮ ಸಂಸ್ಥೆ ಮೂಲಕ ಈ ಕಲಾವಿದರ ಅಭಿನಯದ ದಾಖಲೀಕರಣ ಆಗಿರುವುದು ಶ್ಲಾಘನೀಯ.

error: Content is protected !!
Share This