ಸಾಮಗ್ರಿಗಳು

ಅಕ್ಕಿ – ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು, ನೀರು, ಎಣ್ಣೆ/ತುಪ್ಪ

ಮಾಡುವ ಕ್ರಮ

ಅಕ್ಕಿಯನ್ನು ಒಂದು ಗಂಟೆಯಷ್ಟು ಹೊತ್ತು ನೆನೆಸಬೇಕು. ಅದಕ್ಕೆ ಸಾಕಷ್ಟು ನೀರು ಹಾಕಿ (ಉದ್ದಿನ ದೋಸೆಗಿಂತ ತೆಳ್ಳಗಾಗುವಷ್ಟು) ನುಣ್ಣಗೆ ರುಬ್ಬಬೇಕು. ಹಿಟ್ಟಿನ ಸಾಂದ್ರತೆ ಬಹಳ ತೆಳುವಾಗಿರಬೇಕು. ಆಮೇಲೆ ಕಾವಲಿಗೆ ತುಪ್ಪ/ಎಣ್ಣೆ ಸವರಿ ದೋಸೆ ಎರೆಯುತ್ತಾ ಬರಬೇಕು. ಕಾವಲಿಯಿಂದ ಸೌಟನ್ನು ಎತ್ತರದಲ್ಲಿ ಇಟ್ಟುಕೊಂಡು ಹಿಟ್ಟನ್ನು ಕಾವಲಿಗೆ ಎರಚುವುದು ನೀರು ದೋಸೆ ಎರೆಯುವ ಕ್ರಮ. ಇದನ್ನು ಮೊಗಚಿ ಹಾಕುವುದು ಬೇಡ.

(ಅಕ್ಕಿ ರುಬ್ಬುವಾಗ ತೆಂಗಿನ ತುರಿ ಅಥವಾ ಮುಳ್ಳು ಸೌತೆ ಹಾಕಿಯೂ ನೀರು ದೋಸೆ ಮಾಡಬಹುದು. ರುಚಿಯಾಗಿರುತ್ತದೆ)

error: Content is protected !!
Share This