ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ನಯಂಪಳ್ಳಿಯ ಹರ್ಷಿತಾ ಶೆಟ್ಟಿ ಇವಳಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ತನ್ನ ಗುರುಗಳಾದ 96 ವಯಸ್ಸಿನ ಪ್ರೊ. ಜಿ. ಆರ್. ರೈಯವರ ಗೌರವಾರ್ಥ ನಿರ್ಮಿಸಿದ ನೂತನ ಮನೆ ‘ಶ್ರೀರಘುನಾಥ’ವನ್ನು ಜೂನ್ 25, 2023ರಂದು ಮೈಟ್ ಇಂಜಿನಿಯರಿಂಗ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಪ್ರೊ. ಜಿ. ಆರ್. ರೈ ಉದ್ಘಾಟಿಸಿದರು. “ದೇವರು ಎಲ್ಲ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಜನರನ್ನು ಪ್ರೀತಿಸಿ ಅವರಿಗೆ ಸಹಾಯ ಮಾಡುವುದು ದೇವರ ಪೂಜೆ” ಎಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶದಲ್ಲಿ ನುಡಿದರು.

ಮನೆಯ ಪ್ರಾಯೋಜಕತ್ವ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಮಾತನಾಡಿ ನನ್ನ ಗುರುಗಳ ಗೌರವಾರ್ಥ ಒಂದು ಮನೆಯ ಪ್ರಾಯೋಜಕತ್ವವನ್ನು ವಹಿಸಿರುವುದು ನನಗೆ ಅತ್ಯಂತ ಸಂತಸವನ್ನು ತಂದಿದೆ ಇದು ನನ್ನ ಜೀವನದ ಪರಮ ಪುಣ್ಯದ ಕ್ಷಣ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್.ಬಲ್ಲಾಳರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಜಿ. ಆರ್. ರೈಯವರ ಪುತ್ರ ಡಾ. ಹರಿದಾಸ್ ರೈ, ಸೊಸೆ ಸೀಮಾ ರೈ, ಎಂ. ಗಂಗಾಧರ ರಾವ್‍ರ ಪತ್ನಿ ಸರಸ್ವತಿ ಜಿ. ರಾವ್, ಮಗಳು ಪಾವನಿ ರಾವ್, ಇಂಜಿನಿಯರ್ಸ್ ಎಸೋಸಿಯೇಶನ್‍ನ ಪದಾಧಿಕಾರಿಗಳಾದ ಪಾಂಡುರಂಗ ಆಚಾರ್, ಗೋಪಾಲ ಭಟ್, ಯೋಗೀಶ್ಚಂದ್ರಾಧರ, ಹರೀಶ್, ದಯಾನಂದ, ಹರಿಪ್ರಸಾದ್ ಹಾಗೂ ಶಶಿಧರ ಭಾಗವಹಿಸಿದ್ದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್, ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹಗ್ಡೆ, ವಿ.ಜಿ. ಶೆಟ್ಟಿ,ಯು.ವಿಶ್ವನಾಥ ಶೆಣೈ,ಯು. ರಾಜಾಗೋಪಾಲ ಆಚಾರ್ಯ, ಬಿ. ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ಭಟ್,ಪೃಥ್ವಿರಾಜ ಕವತ್ತಾರ್,ಎ.ನಟರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ಕಿಶೋರ್ ಸಿ. ಉದ್ಯಾವರ, ಕೆ ಅಜಿತ್ ಕುಮಾರ್, ರಾಜೇಶ್ ನಾವುಡ, ಅಶೋಕ್ ಎಂ, ಹೆಚ್. ಎನ್. ವೆಂಕಟೇಶ್, ನಾಗರಾಜ ಹೆಗಡೆ,ಮಂಜುನಾಥ, ಪುಷ್ಪಾ ಜಿ. ರಾವ್,ಗಣಪತಿ ಹೆಗಡೆ, ಸುಧಾ ಅಡುಕಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಹೆಚ್. ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿದ 41ನೆಯ ಹಾಗೂ ಎಂ. ಗಂಗಾಧರ ರಾವ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ 4 ನೆಯ ಮನೆಯಾಗಿದೆ.

error: Content is protected !!
Share This