ಭಾಗವಹಿಸಿದ ಕಲಾವಿಮರ್ಶಕರು

ದಿ.ಈಶ್ವರಯ್ಯ
ಡಾ. ಎಂ.ಪ್ರಭಾಕರ ಜೋಷಿ
ಡಾ. ರಾಘವ ನಂಬಿಯಾರ್

ಯಕ್ಷಗಾನದ ರೂಪ- ನಿರೂಪಣ, ಬಣ್ಣಗಳ ಔಚಿತ್ಯ,
ಯಕ್ಷಗಾನ ಸಂಗೀತವೆಂಬುದು ಸ್ವಂತ ನೆಲೆಯುಳ್ಳ ಅಪ್ಪಟ ಪ್ರಾಚೀನ ರಂಗ ಸಂಗೀತ; ಯಕ್ಷಗಾನ ಸಾಹಿತ್ಯ; ಛಂದಸ್ಸು ಮತ್ತು ತಾಳ; ಭಾಗವತಿಕೆಯಲ್ಲಿ ಸಂಗೀತದ ( ಆಲಾಪ- ಪಲುಕು) ಸ್ಥಾನ; ಹಿಂದಿನ ಸಂಗೀತ ವಿದ್ವಾಂಸರು ಯಕ್ಷಗಾನ ಭಾಗವತಿಕೆಯನ್ನು ಕಂಡ ಬಗ್ಗೆ; ಮಟ್ಟಿನ ನೆಲೆ- ಬೆಲೆ; ಅಂಶ ಗಣಘಟಿತ ಪದ್ಯಗಳು ವಿವಿಧ ತಾಳದಲ್ಲಿ ಅಡಕವಾದಾಗ ಅವು ತಾಳಘಟಕದಲ್ಲಿ ಅರಳಿಕೊಳ್ಳುವ ಬಗ್ಗೆ; ರಸ ಭಾವಗಳಿಗೆ ಅನುಯೋಜ್ಯವಾಗಿ ರೂಪುಗೊಂಡ ಯಕ್ಷಗಾನದ ವೇಷಭೂಷಣಗಳು; ಯಕ್ಷಗಾನ ಕಲೆಯನ್ನು ಕಲಿಯುವುದರ ಜತೆಗೆ ಸಹಕಲೆಗಳ ಸೌಂದರ್ಯಾಲೋಕದ ಅಗತ್ಯತೆ; ಹೆಜ್ಜೆಗಾರಿಕೆ ಮತ್ತು ಯಕ್ಷಗಾನ ಕಲಿಕೆ ಯಾವ ಬಗೆಯಲ್ಲಾದರೆ ಚೆನ್ನ.

ಹೀಗೆ ಹಲವು ನೆಲೆಗಳಲ್ಲಿ ಯಕ್ಷಗಾನವನ್ನು ತಾವು ಪರಿಭಾವಿಸಿದ ರೀತಿಯನ್ನು ಈ ಮೂರೂ ವಿದ್ವಾಂಸರು ವಿಸ್ತಾರವಾಗಿ ಚರ್ಚಿಸಿದ ವಿಡಿಯೋ ಪ್ರತಿಯೊಬ್ಬ ಕಲಾವಿದನೂ ಕಲಾಸಕ್ತನೂ ನೋಡಿದರೆ ತಮ್ಮ ತಮ್ಮ ಅರಿವಿನ ಪರಿಧಿಯ ವಿಸ್ತಾರವಂತೂ ಖಂಡಿತವಾಗಿಯೂ ಆಗುವುದು.

ಉಡುಪಿಯ ಯಕ್ಷಗಾನ ಕಲಾರಂಗದವರು ಈ ವಿಡಿಯೋವನ್ನು ನಿರ್ಮಿಸಿದ್ದಾರೆ. ಇದರ ಅವಧಿ 2 ಘಂಟೆ ಹನ್ನೊಂದು ನಿಮಿಷಗಳು.

  • ಕೃಷ್ಣಪ್ರಕಾಶ ಉಳಿತ್ತಾಯ
error: Content is protected !!
Share This